ತಮಿಳುನಾಡು : ಮಹಿಳೆಯೋರ್ಳನ್ನು 15 ಜನರು ಆಕೆಯ ನಿವಾಸದಿಂದ ಅಪಹರಿಸಿರುವ ಘಟನೆ ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದಿದೆ. ಘಟನೆ ಕುರಿತಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
Shocking: ರಾಂಚಿಯಲ್ಲಿ ಅಪ್ರಾಪ್ತ ಫುಟ್ಬಾಲ್ ಆಟಗಾರ್ತಿ ಮೇಲೆ ಸಾಮೂಹಿಕ ಅತ್ಯಾಚಾರ
ಸುಮಾರು 15 ಮಂದಿ ದುಷ್ಕರ್ಮಿಗಳು ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಕುಟುಂಬಸ್ಥರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಅಪಹರಣ ಮಾಡಿದ್ದಾರೆ. ಇದು ಮನೆಯ ಗೇಟ್ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಲ್ಲಿ ಒಬ್ಬನಾದ ವಿಘ್ನೇಶ್ವರನ್ (34) ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದನು ಎನ್ನಲಾಗುತ್ತಿದೆ.
ಮಾಹಿತಿ ಪಡೆದ ಮೈಲಾಡುತುರೈ ಪೊಲೀಸರು ತಕ್ಷಣ ಶೋಧ ತಂಡವನ್ನು ರಚಿಸಿದ್ದರು. ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ ಮಾಡಿ ಪೊಲೀಸ್ ತಂಡ ವಿಘ್ನೇಶ್ವರನ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ ಎನ್ನಲಾಗುತ್ತಿದೆ.
BIGG NEWS: ಕೊಡಗಿನಲ್ಲಿ ಭಾರಿ ಮಳೆ: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮತ್ತೆ ಬಿರುಕು; ಸಂಚಾರ ಕಡಿತ|RAIN EFFECT
ಘಟನೆ ಸಂಬಂಧ ಮಹಿಳೆ ವಿಘ್ನೇಶ್ವರನ್ಗೆ ಮೈಲಾಡುತುರೈ ಪೊಲೀಸರಿಗೆ ದೂರು ನೀಡಿದ್ದರು. ಅವರು ಆತನಿಗೆ ಎಚ್ಚರಿಕೆ ನೀಡಿದ್ದರು. ಅವರಿಂದ ಲಿಖಿತ ಹೇಳಿಕೆಯನ್ನು ಪಡೆದರು ಮತ್ತು ನಂತರ ಅವರನ್ನು ಬಿಡುಗಡೆ ಮಾಡಿದ್ದರು.
ಜುಲೈ 12 ರಂದು ವಿಘ್ನೇಶ್ವರನ್ ಮಹಿಳೆಯನ್ನು ಅಪಹರಿಸಲು ಪ್ರಯತ್ನಿಸಿದ್ದನು. ಆದರೆ ಅವಳು ತಪ್ಪಿಸಿಕೊಂಡು ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ತನಿಖೆ ಕಯಗೊಂಡು ಆರೋಪಿಗಳನ್ನು ಹುಡುಕಾಟಕ್ಕೆ ಮುಂದಾಗಿದ್ದರು.
Gold Rate :ಚಿನ್ನಾಭರಣ ಪ್ರಿಯರಿಗೆ ಕಹಿಸುದ್ದಿ: ಬಂಗಾರದ ಬೆಲೆ ಮತ್ತೆ ಏರಿಕೆ!