ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿನ ( CET Exam-2022 ) ಅಂಕ ಗೊಂಲದ ವಿರುದ್ಧ ಕೆಇಎ ಕಚೇರಿಯ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ, ಮಹತ್ವದ ಸಭೆಯನ್ನು ನಡೆಸಿದಂತ ಸಚಿವ ಅಶ್ವತ್ಥನಾರಾಯಣ ( Minister Ashwathnarayana ) ಏನ್ ಹೇಳಿದ್ರು ಅಂತ ಮುಂದೆ ಓದಿ..
ಈ ಸಂಬಂಧ ಕೆಇಎ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದಂತ ಅವರು, ಸಿಇಟಿ ಪರೀಕ್ಷೆಯ ಬಗ್ಗೆ ತೆಗೆದುಕೊಂಡಿರುವಂತ ನಿರ್ಧಾರ ಸರಿಯಾಗಿದೆ. ಮೊದಲಿನಿಂದಲೂ ಹೇಗೆ ಸಿಇಟಿಗೆ ಅಂಕಗಳನ್ನು ಪರಿಗಣಿಸಲಾಗುತ್ತದೋ ಅದೇ ರೀತಿಯಲ್ಲಿಯೇ ಈ ಬಾರಿ ಕೆಇಎ ಪರಿಗಣಿಸಿದೆ ಎಂದಿದ್ದಾರೆ.
ಪ್ರತಿ ವರ್ಷ ಸಿಇಟಿ ಮತ್ತು ಪಿಯುಸಿ ಪರೀಕ್ಷೆ ಅಂಕ ಶೇ.50ರಷ್ಟು ಪರಿಗಣಿಸಿಯೇ Rank ನೀಡಲಾಗುತ್ತದೆ. ಇದನ್ನೇ ಮೊದಲಿನಿಂದಲೂ ಕೆಇಎ ಮಾಡುತ್ತಿದೆ. ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಮಾತ್ರವೇ ಪಿಯು ಅಂಕ ಪರಿಗಣಿಸದೇ, ಸಿಇಟಿ ಪರೀಕ್ಷೆ ಮಾಡಿ, ಅದರ ಅಂಕಗಳ ಆಧಾರದ ಮೇಲೆ Rank ಪ್ರಕಟಿಸಲಾಗಿತ್ತು ಎಂದರು.
2021ರ ಬ್ಯಾಚ್ ನವರಿಗೆ ಕಳೆದ ಬಾರಿ ಅವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿಯೇ ಕೆಇಎ ಸರಿಯಾದಂತ ನಿರ್ಧಾರವನ್ನು ಕೈಗೊಂಡಿದೆ. ಕೆಇಎ ತೆಗೆದುಕೊಂಡಿರುವಂತ ನಿರ್ಧಾರದಲ್ಲಿ ಯಾವುದೇ ಗೊಂದವಿಲ್ಲ ಎಂದು ಸ್ಪಷ್ಟ ಪಡಿಸಿದರು.
BIGG NEWS: ಕೊಡಗಿನಲ್ಲಿ ಭಾರಿ ಮಳೆ: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮತ್ತೆ ಬಿರುಕು; ಸಂಚಾರ ಕಡಿತ|RAIN EFFECT