ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದುತಮ್ಮ ಸಂಪುಟ ಪುನಾರಚನೆ ಮಾಡಲಿದ್ದಾರೆ.2011 ರಲ್ಲಿ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ದೊಡ್ಡ ಬೆಳವಣಿಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳಿವೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಿರಿಯ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧನದಲ್ಲಿದ್ದು, ಇದರ ಪಕ್ಷದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದರ ಬೆನ್ನಲ್ಲೆ ಸಂಪುಟ ಪುನಾರಚನೆ ಮಾಡಲು ಸಿಎಂ ಮಮತಾ ಮುಂದಾಗಿದ್ದಾರೆ.
ಸಿಎಂ ಬ್ಯಾನರ್ಜಿಯವರು ಸೋಮವಾರ ತಮ್ಮ ಪಕ್ಷದಲ್ಲಿ ಪ್ರಮುಖ ಬದಲಾವಣೆ ಮಾಡಿದ್ದರು. ಇದರ ಜೊತೆಗೆ ಬುಧವಾರ ಸಂಪುಟ ಪುನಾರಚನೆ ನಡೆಯಲಿದೆ ಎಂದು ಘೋಷಿಸಿದ್ದರು.
ಹೊಸ ಸಚಿವ ಸಂಪುಟಕ್ಕೆ ನಾಲ್ಕೈದು ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗುವುದು. ಆದರೆ ಪ್ರಸ್ತುತ ಸಚಿವ ಸಂಪುಟದ ಅಷ್ಟೇ ಸಂಖ್ಯೆಯ ಸದಸ್ಯರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಅಸ್ತಿತ್ವದಲ್ಲಿರುವ ಕ್ಯಾಬಿನೆಟ್ ಮಂತ್ರಿಗಳಲ್ಲಿ ಕೆಲವು ಖಾತೆಗಳನ್ನು ಪುನರ್ರಚಿಸಬಹುದು ಎಂದು ಅವರು ಹೇಳಿದ್ದಾರೆ.
ಕಳೆದ 11 ವರ್ಷಗಳಲ್ಲಿ, ಸಚಿವ ಸಂಪುಟ ಪುನಾರಚನೆಯ ಕೆಲವೇ ನಿದರ್ಶನಗಳು ನಡೆದಿದ್ದವು. ಅವು ಕೂಡ ಚಿಕ್ಕದಾಗಿದ್ದವು. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ.
ಹಿಂದೆಂದೂ ನಾಲ್ಕೈದು ಹೊಸ ಮುಖಗಳನ್ನು ಸೇರ್ಪಡೆಗೊಳಿಸುವ ಮತ್ತು ಅಂತಹುದೇ ಸಂಖ್ಯೆಯನ್ನು ಸಂಪುಟದಿಂದ ಕೈಬಿಡುವ ಯೋಜನೆ ಇರಲಿಲ್ಲ. ಹಾಗಾಗಿ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಇದು ಅತಿದೊಡ್ಡ ಪುನರ್ರಚನೆಯಾಗಿದೆ ಎಂದು ಟಿಎಂಸಿಯ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.
ಬಾಬುಲ್ ಸುಪ್ರಿಯೋ, ತಪಸ್ ರೇ, ಪಾರ್ಥ ಭೌಮಿಕ್, ಸ್ನೇಹಾಸಿಸ್ ಚಕ್ರವರ್ತಿ ಮತ್ತು ಉದಯನ್ ಗುಹಾ ಅವರ ಹೆಸರುಗಳು ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸುತ್ತು ಹಾಕುತ್ತಿವೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೇಂದ್ರ ಸಂಪುಟದಿಂದ ಕೈಬಿಡಲ್ಪಟ್ಟ ನಂತರ ಕೇಸರಿ ಪಕ್ಷವನ್ನು ತೊರೆದು ಟಿಎಂಸಿಗೆ ಸೇರಿದ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಸುಪ್ರಿಯೊ ಪ್ರಸ್ತುತ ಕೋಲ್ಕತ್ತಾದ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕರಾಗಿದ್ದಾರೆ.