ನವದೆಹಲಿ : ಗೋ ಫಸ್ಟ್ ಏರ್ಲೈನ್ಗೆ ಸೇರಿದ ಕಾರು ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಎ320ನಿಯೋ ವಿಮಾನದಡಿಗೆ ಹೋಗಿದ್ದು, ವಿಮಾನದ ಚಕ್ರಕ್ಕೆ ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೆಹಲಿ ವಿಮಾನ ನಿಲ್ದಾಣದ T2 ಟರ್ಮಿನಲ್ನಲ್ಲಿ ಸಂಭವಿಸಿದ ಘಟನೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಥವಾ ನಾಗರಿಕ ವಿಮಾನಯಾನ ನಿಯಂತ್ರಕ ತನಿಖೆ ನಡೆಸಲಿದೆ ಎಂದು ಅದರ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನ ಚಾಲಕ ಮದ್ಯ ಸೇವಿಸಿದ್ದನ ಎಂಬುದನ್ನು ತಿಳಿಯಲು ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದು ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
#WATCH | A Go Ground Maruti vehicle stopped under the nose area of the Indigo aircraft VT-ITJ that was parked at Terminal T-2 IGI airport, Delhi. It was an Indigo flight 6E-2022 (Delhi–Patna) pic.twitter.com/dxhFWwb5MK
— ANI (@ANI) August 2, 2022
ಘಟನೆಯಲ್ಲಿ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ವಾಯುಯಾನ ಉದ್ಯಮದ ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿವೆ.
ಇಂಡಿಗೋ ವಿಮಾನವು ಇಂದು ಬೆಳಿಗ್ಗೆ ಪಾಟ್ನಾಗೆ ಹೊರಡಲು ಸಿದ್ಧವಾಗುತ್ತಿದ್ದಾಗ ಗೋ ಫಸ್ಟ್ ಏರ್ಲೈನ್ಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರು ಅದರ ಅಡಿಯಲ್ಲಿ ಸಿಲುಕಿ ವಿಮಾದ ಚಕ್ರಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿತ್ತು ಎನ್ನಲಾಗುತ್ತಿದೆ.
ಬಳಿಕ ನಿಗದಿತ ಸಮಯಕ್ಕೆ ವಿಮಾನವು ಪಾಟ್ನಾಗೆ ಹೊರಟಿದೆ ಎಂದು ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿವೆ.