ಬೆಂಗಳೂರು: ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ದಿನದಂದು ಸಿದ್ದರಾಮೋತ್ಸವ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಅವರು ತಮ್ಮ 5 ವರ್ಷ ರಾಜ್ಯವನ್ನು ಹಾಳು ಮಾಡಿ ಈಗ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS: ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 5 ವರ್ಷ ಈ ರಾಜ್ಯದಲ್ಲಿ ಮಾಡಬಾರದ್ದನ್ನು ಮಾಡಿದೆ. ಆದರೆ ಈಗ ಜನರ ಮನಸ್ಸನ್ನು ಏನೋ ಮಾಡ್ತೀವಿ ಅಂತ ತೋರಿಸೋಕೆ ಪೋಸ್ ಕೊಡ್ತಿದ್ದಾರೆ. ಜನ ಯಾರು ಇದನ್ನು ನಂಬೋದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಲಾ ಅಂಡ್ ಅರ್ಡರ್’ ಪರಿಸ್ಥಿತಿ ಹೇಗೆ ಹಾಳಾಗ್ತಿದೆ ಅಂತ ಈಗ ಗೊತ್ತಾಗುತ್ತಿದೆ. ಅಲ್ಪಸಂಖ್ಯಾತ, ಕೆಲ ಮತಾಂಧರ ಮೇಲೆ ಇದ್ದ ಕೇಸ್ಗಳನ್ನ ವಾಪಸ್ ಪಡೆದಿದ್ದರು ಎಂದು ಆರೋಪಿಸಿದ್ದಾರೆ.