ನವದೆಹಲಿ: ಭಾರತದ ಮೊಟ್ಟಮೊದಲ 5ಜಿ ತರಂಗಾಂತರಗಳ ಹರಾಜಿನಲ್ಲಿ ಮಾರಾಟಕ್ಕೆ ಇರಿಸಲಾದ ಒಟ್ಟು ಸ್ಪೆಕ್ಟ್ರಂನ ಶೇ.71ರಷ್ಟು ಭಾಗವನ್ನು ಸರ್ಕಾರ ಮಾರಾಟ ಮಾಡಿದ್ದು, 1,50173 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಭವ್ ತಿಳಿಸಿದ್ದಾರೆ. ಬ್ಲಾಕ್ ನಲ್ಲಿರುವ ಒಟ್ಟು 72.098 ಗಿಗಾಹರ್ಟ್ಸ್ ತರಂಗಾಂತರಗಳ ಪೈಕಿ, ನಾಲ್ಕು ಬಿಡ್ಡರ್ ಗಳಲ್ಲಿ 51.236 ಗಿಗಾಹರ್ಟ್ಸ್ ಅನ್ನು ತೆಗೆದುಕೊಳ್ಳಲಾಗಿದೆ. ಹರಾಜಿನಿಂದ ಒಟ್ಟು 1,50,173 ಕೋಟಿ ರೂ ಸಂಗ್ರಹ ಮಾಡಲಾಗಿದೆ.
ಹರಾಜಿನ ಮುಕ್ತಾಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, “ಖರೀದಿಸಿದ ಸ್ಪೆಕ್ಟ್ರಮ್ ದೇಶದ ಎಲ್ಲಾ ವಲಯಗಳನ್ನು ಒಳಗೊಳ್ಳುವಷ್ಟು ಉತ್ತಮವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. 2-3 ವರ್ಷಗಳಲ್ಲಿ, 5ಜಿಗೆ ಉತ್ತಮ ಕವರೇಜ್ ನೀಡುತ್ತದೆ ಅಂತ ಹೇಳಿದ್ದಾರೆ.