ನವದೆಹಲಿ : ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಉತ್ತಮ ವರದಿ ಮತ್ತು ಆರ್ಥಿಕ ಚೇತರಿಕೆಯಿಂದಾಗಿ ವರ್ಷದಿಂದ ವರ್ಷಕ್ಕೆ (y-o-y) ಶೇಕಡಾ 28ರಷ್ಟು ಏರಿಕೆಯಾಗಿ 1,48,995 ಕೋಟಿ ರೂ.ಗೆ ತಲುಪಿದೆ. ಇದು ಎರಡನೇ ಅತಿ ಹೆಚ್ಚು ಜಿಎಸ್ಟಿ ಆದಾಯ ಸಂಗ್ರಹವಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ ಜೂನ್ನಲ್ಲಿ 1,44,616 ಕೋಟಿ ರೂಪಾಯಿ ಸಂಗ್ರಹವಾಗಿದೆ.
The gross GST revenue collected in the month of July 2022 is Rs 1,48,995 crores, the second highest ever & 28% higher than the revenues in the same month last year, says Ministry of Finance.
— ANI (@ANI) August 1, 2022
ಜುಲೈ 2022ರಲ್ಲಿ ಜಿಎಸ್ಟಿ ಸಂಗ್ರಹವು ಏಪ್ರಿಲ್ 2022ರ 1,67,540 ಕೋಟಿ ರೂ.ಗಳ ನಂತ್ರ ಎರಡನೇ ಅತ್ಯಧಿಕವಾಗಿದೆ. ಜಿಎಸ್ಟಿ ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್ಟಿ ಸಂಗ್ರಹವು 1.40 ಲಕ್ಷ ಕೋಟಿ ರೂ.ಗಳ ಗಡಿಯನ್ನ ದಾಟಿರುವುದು ಇದು ಆರನೇ ಬಾರಿಯಾಗಿದೆ. ಇನ್ನು ಮಾರ್ಚ್ 2022ರಿಂದ ಸತತ ಐದನೇ ತಿಂಗಳಾಗಿದೆ.
“ಜುಲೈ 2022ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯವು 1,48,995 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ 25,751 ಕೋಟಿ ರೂ., ಎಸ್ಜಿಎಸ್ಟಿ 32,807 ಕೋಟಿ ರೂ., ಐಜಿಎಸ್ಟಿ 79,518 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,420 ಕೋಟಿ ರೂ.ಗಳು ಸೇರಿದಂತೆ) ಮತ್ತು ಸೆಸ್ 10,920 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 99 ಕೋಟಿ ರೂ.ಗಳು ಸೇರಿದಂತೆ). ಜಿಎಸ್ಟಿ ಜಾರಿಯಾದ ನಂತರ ಇದು ಎರಡನೇ ಅತ್ಯಧಿಕ ಆದಾಯವಾಗಿದೆ” ಎಂದು ಹಣಕಾಸು ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರವು ಸಿಜಿಎಸ್ಟಿಗೆ 32,365 ಕೋಟಿ ರೂ., ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 26,774 ಕೋಟಿ ರೂ. ನಿಯಮಿತ ಇತ್ಯರ್ಥದ ನಂತರ ಜುಲೈ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿಗೆ 58,116 ಕೋಟಿ ರೂ ಮತ್ತು ಎಸ್ಜಿಎಸ್ಟಿಗೆ 59,581 ಕೋಟಿ ರೂಪಾಯಿಯಾಗಿದೆ.
“ಜುಲೈ 2022ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ 1,16,393 ಕೋಟಿ ರೂ.ಗಳ ಜಿಎಸ್ಟಿ ಆದಾಯಕ್ಕಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡಾ 48 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯಕ್ಕಿಂತ ಶೇಕಡಾ 22 ರಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.