ಭೋಪಾಲ್: ಮಧ್ಯಪ್ರದೇಶದ ಶಾಹದೋಲ್ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೃತ ತಾಯಿಯ ಶವವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಕಾರಣ 80 ಕಿಮೀ ದೂರ ಬೈಕ್ನಲ್ಲೇ ಕ್ರಮಿಸಿ ಮೃತದೇಹವನ್ನು ಕೊಂಡಿಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ.
ನಂತ್ರ ರೋಗಿಯ ಮಗ ಸುಂದರ್ ಯಾದವ್ ರೋಗಿಯ ಮಗ ಸುಂದರ್ ಯಾದವ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಮಂಡಳಿ ವಿಷಯವನ್ನು ನಿರಾಕರಿಸಿದೆ. ಹೀಗಾಗಿ, ಖಾಸಗಿ ವಾಹನದ ವ್ಯವಸ್ಥೆಗೆ ಮುಂದಾದ ಯಾದವ್ನನ್ನು 5,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣ ಇಲ್ಲದ ಸುಂದರ್, 100 ರೂ.ಗೆ ಮರದ ಚಪ್ಪಡಿ ಖರೀದಿಸಿ, ಅದಕ್ಕೆ ತಾಯಿಯ ಶವವನ್ನು ಕಟ್ಟಿಕೊಂಡು 80 ಕಿ.ಮೀ ದೂರದ ಅನುಪ್ಪುರ್ ಜಿಲ್ಲೆಯ ಗುಡಾರು ಗ್ರಾಮಕ್ಕೆ ತೆರಳಿದ್ದಾರೆ.
किसी भी राज्य में मंत्रिमंडल क्यों हो,अगर हां तो तस्वीर क्यों नहीं बदलती ये शहडोल का छोटा अस्पताल नहीं मेडिकल कॉलेज हैं बेटे अपनी मां का शव बाइक पर ले जा रहे हैं @ChouhanShivraj इसके बाद भी स्वास्थ्य मंत्री के तर्क हो सकते हैं! आपलोग सिर्फ चुनाव विभाग रखें जो काम साल भर करते हैं pic.twitter.com/NJ9NvoWDsv
— Anurag Dwary (@Anurag_Dwary) August 1, 2022
ಈ ಬಗ್ಗೆ ಮಾತನಾಡಿರುವ ಸುಂದರ್, ಜಿಲ್ಲಾ ಆಸ್ಪತ್ರೆಯ ನರ್ಸ್ಗಳ ನಿರ್ಲಕ್ಷ್ಯದ ಚಿಕಿತ್ಸೆಯಿಂದ ನನ್ನ ತಾಯಿಯ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಆಸ್ಪತ್ರೆಯ ಆಡಳಿತ ಮಂಡಳಿಯೇ ಕಾರಣ. ಅಷ್ಟೇ ಅಲ್ದೇ, ಮೃತ ದೇಹವನ್ನು ಸಾಗಿಸಲು ಆಸ್ಪತ್ರೆಯು ವಾಹನವನ್ನು ಸಹ ಒದಗಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಭೂಮಿಯು ಇದ್ದಕ್ಕಿದ್ದಂತೆ ವೇಗವಾಗಿ ತಿರುಗುತ್ತಿದ್ದು, ಪರಿಣಾಮವು ‘ವಿನಾಶಕಾರಿಯಾಗಿದೆ’ : ಏಕೆ ಗೊತ್ತಾ…?