ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಕಳೆದೊಂದು ತಿಂಗಳಲ್ಲಿ ಪ್ರವಾಹದಲ್ಲಿ 120 ಜನರು ಸಾವನ್ನಪ್ಪಿದ್ದು, 152 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ದೃಢಪಡಿಸಿದೆ.
ಈ ಕುರಿತಂತೆ ವಿಪತ್ತು ನಿರ್ವಹಣೆಗೆ ರಾಜ್ಯ ಸಚಿವಾಲಯ ಮಾಹಿತಿ ನೀಡಿದ್ದು, 10 ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಪ್ರವಾಹ ಸಂಭವಿಸಿದ್ದು, ಹೆದ್ದಾರಿ, ರಸ್ತೆಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.
ಸಚಿವಾಲಯದ ಪ್ರಕಾರ, 600 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಭಾನುವಾರದವರೆಗೆ, ಬಡಾಖಾನ್, ಕುನಾರ್, ನುರಿಸ್ತಾನ್, ಲಾಗ್ಮನ್, ನಂಗರ್ಹಾರ್, ಕಾಬುಲ್, ಘಜ್ನಿ, ಜಾಬುಲ್, ಕಂದಹಾರ್, ಲೋಗರ್, ಪಕ್ತಿಯಾ ಮತ್ತು ಪಕ್ತಿಕಾ ಪ್ರಾಂತ್ಯಗಳಿಗೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.
ಅಫ್ಘಾನಿಸ್ತಾನದ ಹವಾಮಾನ ಪ್ರಾಧಿಕಾರವು ಬಾಲ್ಖ್, ಹೆರಾಟ್, ಫರಾಹ್, ಹೆಲ್ಮಂಡ್, ಕಂದಹಾರ್ ಮತ್ತು ನಿಮ್ರೋಜ್ ಎಚ್ಚರಿಕೆ ನೀಡಿತ್ತು. ಗಂಟೆಗೆ 20-90 ಕಿಮೀ ನಡುವೆ ಗಾಳಿಯ ವೇಗದಲ್ಲಿ ಮಳೆಯಾಗಲಿದೆ ಎನ್ನಲಾಗುತ್ತಿದೆ.