ಚನ್ನಪಟ್ಟಣ: ಮಂಗಳೂರಿನಲ್ಲಿ ಕಳೆದ 2 ದಶಕಗಳಿಂದ ಎರಡು ಕೋಮುಗಳ ನಡುವೆ ಸಾಮರಸ್ಯದ ಕೊರತೆ ಇದೆ. ಇದನ್ನು ಸರಿಪಡಿಸುವುದು ಸರ್ಕಾರದ ಕೆಲಸ. ಆದರೆ, ಸಮಾಜದಲ್ಲಿ ಕೋಮು ಭಾವನೆಯ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಆಗಸ್ಟ್ 1ರಂದು(ಇಂದು) ಭೇಟಿ ಕೊಡುತ್ತಿದ್ದೇನೆ. ಹತ್ಯೆತ=ಯಾಗಿರುವ ಮೂವರೂ ಯುವಕರ ಕುಟುಂಬಗಳನ್ನೂ ಭೇಟಿಯಾಗುತ್ತಿದ್ದೇನೆ. ಬಡ ಮಕ್ಕಳ ಸಾವು, ನೋವುಗಳನ್ನು ಬಂಡವಾಳ ಮಾಡಿಕೊಂಡಿದ್ದಾರೆ. ಇಲ್ಲಿ ದಿಡ್ಡ ಮಟ್ಟಿನ ಷಡ್ಯಂತ್ರ ಇದೆ. ಕೋಮುಗಲಭೆಯಿಂದ ಮಂಗಳೂರಿನಲ್ಲಿ ವಾತಾವರಣ ಹಾಳಾಗಿದೆ. ಸಿಎಂನಿಂದ ಈ ರೀತಿಯ ಮಂಗಳೂರಿನ ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಎಲ್ಲ ರಾಜಕೀಯ ಪಕ್ಷಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಘಟನೆಗಳಿಗೂ ನಾನು ಹೇಳುವುದು ಇಷ್ಟೇ. ಯಾರು ಬೇಕಾದರೂ ಸಂಘಟನೆ ಮಾಡಿಕೊಳ್ಳಲಿ ನನ್ನ ತಕರಾರಿಲ್ಲ. ಆದರೆ ಈ ರೀತಿಯ ಹತ್ಯೆಗಳಿಂದ ಸಂಘಟನೆ ಸಾಧ್ಯವಿಲ್ಲ ಎಂದಿದ್ದಾರೆ.
ಪಿಕ್ನಿಕ್ಗೆಂದು ಹೋಗಿ ಬಾಲಾಸನ್ ನದಿಯಲ್ಲಿ ಸಿಲುಕಿದ್ದ 11 ವಿದ್ಯಾರ್ಥಿಗಳ ರಕ್ಷಣೆ
Bank Holidays 2022: ಆಗಸ್ಟ್ನಲ್ಲಿ ಬ್ಯಾಂಕ್ಗಳು ʻ18 ದಿನʼ ಬಂದ್: ಇಲ್ಲಿದೆ ರಜಾ ದಿನಗಳ ಪಟ್ಟಿ…
BIG NEWS: ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಗ್ರೇನೆಡ್ ಪತ್ತೆ, ಮಕ್ಕಳು ಏನ್ ಮಾಡ್ತಾ ಇದ್ರು ಗೊತ್ತಾ.?