ಬೆಂಗಳೂರು : ಮಂಗಳೂರಿನಲ್ಲಿ ಪ್ರವೀಣ್, ಫಾಜಿಲ್ ಸರಣಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಗೃಹ ಸಚಿವರ ನಿವಾಸ ಎದುರು ಎಸ್ಡಿಪಿಐ ಮತ್ತು ಪಿಎಫ್ ಐ ( : SDPI & PFI ) ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಎಬಿವಿಪಿ (ABVP )ಕಾರ್ಯಕರ್ತರ ಪ್ರತಿಭಟನೆ ನಡೆಯುತ್ತಿದೆ.
ಜಯಮಹಾಲ್ ಬಳಿಯಿರುವ ಗೃಹ ಸಚಿವರ ಸರ್ಕಾರಿ ನಿವಾಸದ ಎದುರು ಬೆರಳೆನಿಕೆಯಷ್ಟು ಪೊಲೀಸರು ಮಾತ್ರವಿದ್ದು, ಪ್ರತಿಭಟನೆ ನಿಯಂತ್ರಣಕ್ಕೆ ಪೊಲೀಸರು ಹರಸಾಹನ ಪಡುತ್ತಿದ್ದಾರೆ. ಗೃಹ ಸಚಿವರ ನಿವಾಸದ ಗೇಟ್ ತಳ್ಳಿ ಬಾಗಿಲು ತೆರೆಯಲು ಒತ್ತಾಯಿಸುತ್ತಿದ್ದಾರೆ. ಈ ವೇಳೆ ABVP ಕಾರ್ಯಕರ್ತರ ವಶಕ್ಕೆ ಪಡೆಯಲಾಗಿದೆ.
ಪ್ರತಿಭಟನಾ ಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವೇ ನಡೆಯಿತು. ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಿವಾಸದ ಎದುರಿದ್ದ ಹೂ ಕುಂಡುಗಳೆಲ್ಲ ಪುಡಿಪುಡಿಯಾಗಿದೆ.