ಪಂಜಾಬ್ : 13 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ಕ್ರೂರವಾಗಿ ದಾಳಿ ನಡೆದಿದ್ದು, ಘಟನೆಯಲ್ಲಿ ಬಾಲಕನ ಕಿವಿಯನ್ನು ಕಚ್ಚಿರುವ ಘಟನೆ ಪಂಜಾಬಿನ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವೇಳೆ ಜೊತೆಯಲ್ಲಿದ್ದ ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುರುದಾಸ್ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಘಟನೆ ನಡೆದಿದ್ದು, ತಂದೆ ಮತ್ತು ಬಾಲಕ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ತನ್ನ ಮಾಲೀಕನೊಂದಿಗೆ ಹೊರಗೆ ನಿಂತಿದ್ದ ಪಿಟ್ಬುಲ್ ನಾಯಿ ಬಾಲಕನನನ್ನು ನೋಡಿ ಬೊಗಳಲು ಆರಂಭಿಸಿತು.
ಶೀಘ್ರದಲ್ಲೇ ಮಾಲೀಕರು ಆಕಸ್ಮಿಕವಾಗಿ ನಾಯಿಯ ಬಾರು ಕೈಬಿಟ್ಟರು. ಆಗ ಪಿಟ್ಬುಲ್ ಹುಡುಗನ ಮೇಲೆ ದಾಳಿ ಮಾಡಿದ್ದು, ಬಾಲಕನ ಕಿವಿಯನ್ನು ಕಚ್ಚಿದೆ ಎಂದು ವರದಿಯಾಗಿದೆ.
ನಂತರ ಮಾಲೀಕರು ನಾಯಿಯನ್ನು ನಿಯಂತ್ರಿಸಿ ಮನೆಗೆ ತೆರಳಿದರು. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಲಕ್ನೋದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಸುಮಾರು 82 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರ ಮೇಲೆ ಪಿಟ್ಬುಲ್ ನಾಯಿ ದಾಳಿ ನಡೆಸಿತ್ತ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದರು.