ಭೋಪಾಲ್ : ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೃದ್ಧರೋರ್ವರನ್ನು ಅಮಾನುಷವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆ ಕುರಿತಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಗುರುವಾರ ಈ ಘಟನೆ ನಡೆದಿದ್ದು, ಅಂದಿನಿಂದ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ವೇಳೆ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಿದ್ದರು ಎನ್ನಲಾಗುತ್ತಿದೆ.
A video of a uniformed cop kicking an elderly man at Jabalpur railway station has given rise to a wave of outrage at police. A passenger at the railway station had broadcast it live at the time of the incident @ndtv @ndtvindia pic.twitter.com/5PpijBPcw1
— Anurag Dwary (@Anurag_Dwary) July 29, 2022
ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ, ವಯಸ್ಸಾದ ವ್ಯಕ್ತಿಯ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ವ್ಯಕ್ತಿಯನ್ನು ಅವನ ಕಾಲುಗಳಿಂದ ಹಿಡಿದು ಪ್ಲಾಟ್ಫಾರ್ಮ್ನ ಅಂಚಿನಲ್ಲಿ ನೇತುಹಾಕಿ ಮತ್ತೆ ಅವನನ್ನು ಒದೆಯುವುದು ಕಂಡುಬರುತ್ತದೆ. ಅಧಿಕಾರಿಯ ಹಲ್ಲೆಯನ್ನು ಗಮನಿಸಿದರೂ ಯಾರು ಮುಂದಾಗುವುದಿಲ್ಲ.
ಹಲ್ಲೆಗೊಳಗಾದವರನ್ನು ಗೋಪಾಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ನನ್ನನ್ನು ನಿಂದಿಸುತ್ತಿದ್ದನು. ಇದೇ ವಿಚಾರವಾಗಿ ನಾನು ಪೊಲೀಸರಿಗೆ ದೂರು ನೀಡಲು ಮುಂದಾದಾಗ ನನ್ನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ. ನನಗೆ ಪೊಲೀಸ್ ಪರಿಚಯವಿಲ್ಲ ಎಂದು ಸಂತ್ರಸ್ತ ಹಿರಿಯ ವ್ಯಕ್ತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’