ಗೊಂಡಾ (ಉತ್ತರ ಪ್ರದೇಶ): ಗೊಂಡಾದಲ್ಲಿ ವರದಕ್ಷಿಣೆ ನೀಡದಿದ್ದಕ್ಕಾಗಿ ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಆತನ ಸೋದರ ಸಂಬಂಧಿ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ, ಇದಾದ ಬಳಿಕ ಮಹಿಳೆಗೆ ‘ತ್ರಿವಳಿ ತಲಾಖ್’ ಮೂಲಕ ವಿಚ್ಛೇದನ ನೀಡಿರುವ ಘಟನೆ ನಡೆದಿದೆ.
ಆರೋಪಿ ಪತಿಯಾದ ಲಕ್ನೋ ಮೂಲದ ಮೊಹಮ್ಮದ್ ಅದ್ನಾನ್ ಅವರನ್ನು ಗುರುವಾರ ಪೊಲೀಸರು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆತನ ಸೋದರ ಸಂಬಂಧಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ಪತಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದನು ಮತ್ತು ಅದಕ್ಕಾಗಿ ತನಗೆ ಥಳಿಸುತ್ತಿದ್ದ. ಈ ಕಾರಣದಿಂದ ಮಹಿಳೆ ಆಕೆಯ ತಾಯಿಯ ಮನೆಯಲ್ಲೇ ವಾಸವಿದ್ದಳು. ಮಂಗಳವಾರ ಮಹಿಳೆ ಮತ್ತು ಆಕೆಯ ಸೋದರಸಂಬಂಧಿ ತನ್ನ ಅತ್ತೆಯ ಮನೆಗೆ ಹೋಗಿದ್ದರು. ಮನೆಯಲ್ಲಿ ಆರೋಪಿಗಳು ಮಹಿಳೆಯನ್ನು ಒಬ್ಬಂಟಿಯಾಗಿ ಕಂಡಿದ್ದು, ಈ ವೇಳೆ ಅತ್ಯಾಚಾರ ಎಸಗಿದ್ದಾರೆ. ನಂತರ ಅದ್ನಾನ್ ಆಕೆಯನ್ನು ಥಳಿಸಿ, ಕಾನೂನುಬಾಹಿರವಾದ ‘ತ್ರಿವಳಿ ತಲಾಖ್’ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Commonwealth Games 2022: ಭಾರತದ ಕ್ರೀಡಾಪಟುಗಳ ಇಂದಿನ ಆಟದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…
ಇಂದು ಅಂತರರಾಷ್ಟ್ರೀಯ ಹುಲಿ ದಿನ: ಇಲ್ಲಿದೆ ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯ!
BIGG BREAKING NEWS : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ