ಉಡುಪಿ: ಕೊರೊನಾ, ಮಂಕಿ ಫಾಕ್ಸ್ ಆತಂಕದ ನಡುವೆ ಉಡುಪಿಯಲ್ಲಿ ʻಇಲಿ ಜ್ವರʼದ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 85 ಇಲಿ ಜ್ವರ ಪ್ರಕರಣಗಳು ದಾಖಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೂ ಪ್ರಕರಣಗಳು ಮತ್ತಷ್ಟು ದಾಖಲಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಿ ಜ್ವರವು ಸಾಮಾನ್ಯ ಜ್ವರದಂತೆ ಕಂಡರೂ ಅದು ಮಾರಕವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಕಿಡ್ನಿ, ಮೆದುಳು, ಯಕೃತ್ಗೆ ಹಾನಿಯಾಗುವುದು ಖಚಿತ. ಹೀಗಾಗಿ, ನಿಮ್ಮಲ್ಲಿ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದರೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ.
ಮಳೆ, ನೆರೆನೀರಿನ ಮೂಲಕ ಇಲಿ ಜ್ವರ ಬರುವ ಸಾಧ್ಯತೆಗಳಿವೆ. ಇಲಿಯ ಮೂತ್ರ ನೆರೆ ನೀರು ಸೇರಿ ವೈರಸ್ ಮನುಷ್ಯನ ದೇಹಕ್ಕೆ ಸೇರಿ ಜ್ವರ ಬರುವ ಸಾಧ್ಯತೆ ಹೆಚ್ಚು. ಜಮೀನಿನಲ್ಲಿ ನಿಂತ ನೆರೆ ನೀರಿನಲ್ಲಿ ಕೆಲಸ ಮಾಡುವವರ ಕಾಲಿನಲ್ಲಿರುವ ಬಿರುಕುಗಳ ಮೂಲಕ ವೈರಾಣು ದೇಹ ಪ್ರವೇಶಿಸುವಿಕೆಯಿಂದ ಈ ಜ್ವರ ಬರಬಹುದು.
Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ʻಕಾಮನ್ವೆಲ್ತ್ ಕ್ರೀಡಾಕೂಟʼಕ್ಕೆ ವರ್ಣರಂಜಿತ ಚಾಲನೆ… ವಿಡಿಯೋ
ಇಲಿ ಜ್ವರದ ಲಕ್ಷಣ & ಹರಡುವಿಕೆ?
ಇಲಿ ಜ್ವರವು ಇಲಿ, ಹಸು, ನಾಯಿ, ಹಂದಿ ಮೂಲಕ ಹರಡುತ್ತದೆ. ಪರಿಸರ ನೈರ್ಮಲ್ಯದ ಕೊರತೆ ಇಲಿ ಜ್ವರ ಹರಡಲು ಮುಖ್ಯ ಕಾರಣ. ರೋಗಾಣು ಮನುಷ್ಯನ ದೇಹ ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ಜ್ವರ ಕಾಡಲು ಪ್ರಾರಂಭವಾಗುತ್ತದೆ. ಮೈಕೈ ನೋವು, ತಲೆನೋವು , ವಾಂತಿ, ಹೊಟ್ಟೆ ನೋವು ಈ ಜ್ವರದ ಲಕ್ಷಣವಾಗಿದೆ.
ಕೃಷಿಕರು, ಮೀನುಗಾರರಿಗೆ ಎಚ್ಚರಿಕೆ
ಬೇಸಾಯಗಾರರು, ಮೀನುಗಾರರು, ಹಂದಿ ಸಾಕುವವರು, ಚರಂಡಿ ಕೂಲಿ ಕಾರ್ಮಿಕರು, ಮಾಂಸದ ವ್ಯಾಪಾರಿಗಳಿಗೆ ಜ್ವರ ಭೀತಿ ಹೆಚ್ಚಾಗಿ ಎದುರಾಗಿದ್ದು, ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಗುಣಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಯಾವುದೇ ಜ್ವರದ ಲಕ್ಷಣ ಕಂಡುಬಂದರೂ ನಿರ್ಲ್ಯಕ್ಷಿಸದೇ, ಕೂಡಲೇ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಸರ್ವೇಕ್ಷಣಾಧಿಕಾರಿ ನಾಗರತ್ನ ಜನರಿಗೆ ಮನವಿ ಮಾಡಿದ್ದಾರೆ..
ಇಲಿಗಳ ಮಲ, ಮೂತ್ರದಿಂದ ರೋಗ ಹರಡುವಿಕೆ
ಇಲಿ, ಹೆಗ್ಗಣಗಳ ಮಲ ಮತ್ತು ಮೂತ್ರದಿಂದ ರೋಗಾಣು ಮನುಷ್ಯನ ಕಾಲಿನಲ್ಲಿ ಉಂಟಾದ ಬಿರುಕಿನ ಮೂಲಕ ರೋಗಾಣು ದೇಹ ಪ್ರವೇಶಿಸುವುದರಿಂದ ಈ ಜ್ವರ ಬರುತ್ತದೆ. ಮಳೆ ನೀರು ಗುಡ್ಡಗಾಡು ಪ್ರದೇಶದಿಂದ ಹರಿದು ಬಂದಾಗ ಅದರ ಜೊತೆ ಇಲಿ, ಹೆಗ್ಗಣಗಳ ಹಿಕ್ಕೆ ಸೇರಿ ಮನುಷ್ಯ ಕಾಲುಗಳಿಗೆ ಸೋಕುವುದರಿಂದ ಈ ಕಾಯಿಲೆ ಉಂಟಾಗುತ್ತದೆ. ನೀರಿನಲ್ಲಿ ಈ ವೈರಸ್ಗಳ ಜೀವಿತಾವಧಿ ಹೆಚ್ಚು ದಿನಗಳವರೆಗೆ ಇರುತ್ತದೆ.
Job Alert : ಉದ್ಯೋಗಾಕಾಂಕ್ಷಿಗಗಳೇ ಗಮನಿಸಿ : 1,411 ಕಾನ್ಸ್ ಟೇಬಲ್ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ