ಚಿಕ್ಕಮಗಳೂರು : ವಿಕ್ರಂತ್ ರೋಣ ಸಿನಿಮಾ ವೀಕ್ಷಣೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಚಾಕು ಇರಿತ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರಿನ ಮಿಲನ್ ಚಿತ್ರ ಮಂದಿರದಲ್ಲಿ ವಿಕ್ರಂತ್ ರೋಣ ಸಿನಿಮಾ ವೀಕ್ಷಣೆ ವೇಳೆ, ಸಿನಿಮಾ ಸ್ಟೈಲ್ನಲ್ಲಿ ಇಳೆಹೊಳೆ ಗಣೇಶ ಹಾಗೂ ಗೂಳಿ ಅಳಿಯಾಸ್ ಭರತ್ ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಪದೇಪದೇ ಶೌಚಾಲಯಕ್ಕೆ ತೆರಳುತ್ತಿದ್ದ ಎಂದ ಕಾರಣಕ್ಕಾಗಿ ಗಲಾಟೆ ನಡೆದು, ಬಳಿಕ ಪರಸ್ಪರ ಲಾಂಗ್ ಮಚ್ಚು, ಚಾಕುವಿನಿಂದ ಬಡಿದಾಡಿಕೊಂಡು ತಾರಕ್ಕೇರಿತ್ತು, ಇದೀಗ ಇಬ್ಬರ ಸ್ಥಿತಿ ಗಂಭೀರಗೊಂಡು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.