ನವದೆಹಲಿ: ತೆರಿಗೆ ವಂಚನೆ ವಿರುದ್ಧ ಆದಾಯ ತೆರಿಗೆ ಇಲಾಖೆ ನೋಯ್ಡಾ, ಗುರುಗ್ರಾಮ್ ಮತ್ತು ಫರಿದಾಬಾದ್ನ ಎರಡು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ.
Income Tax department conducting searches at Metro Group of Hospitals. More than 20 premises are covered in search. Searches underway at Noida, Gurugram, Faridabad and other premises: Sources pic.twitter.com/PIZ6w2G9zr
— ANI (@ANI) July 27, 2022
ಆದಾಯ ತೆರಿಗೆ ಇಲಾಖೆ ಮೆಟ್ರೋ ಗ್ರೂಪ್ ಆಫ್ ಹಾಸ್ಪಿಟಲ್ಸ್ ನಲ್ಲಿ ಶೋಧ ನಡೆಸುತ್ತಿದೆ. ದಾಳಿಯಲ್ಲಿ 20 ಕ್ಕೂ ಹೆಚ್ಚು ಆವರಣಗಳು ಒಳಗೊಂಡಿವೆ. “ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಮತ್ತು ಇತರ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ವರದಿಗಳನ್ನು ನಂಬುವುದಾದರೆ, ಸೆಕ್ಟರ್ 11 ಮತ್ತು 12 ರ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ 7:30 ರಿಂದ ದಾಳಿ ನಡೆಯುತ್ತಿದೆ. ಫರೀದಾಬಾದ್ನ ಮರೆಂಗೊ ಕ್ಯೂಆರ್ಜಿ ಆಸ್ಪತ್ರೆ, ಸರ್ವೋದಯ ಆಸ್ಪತ್ರೆ, ಎಸ್ಎಸ್ಬಿ ಆಸ್ಪತ್ರೆ ಮತ್ತು ಅಕಾರ್ಡ್ ಆಸ್ಪತ್ರೆಗಳ ಮೇಲೂ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ.
ಆದಾಯ ತೆರಿಗೆ ಇಲಾಖೆ ಮೆಟ್ರೋ ಗ್ರೂಪ್ ಆಫ್ ಹಾಸ್ಪಿಟಲ್ಸ್ ನಲ್ಲಿ ಶೋಧ ನಡೆಸುತ್ತಿದೆ. 20 ಕ್ಕೂ ಹೆಚ್ಚು ಆವರಣಗಳು ಶೋಧದಲ್ಲಿವೆ. ನೋಯ್ಡಾ, ಗುರುಗ್ರಾಮ, ಫರಿದಾಬಾದ್ ಮತ್ತು ಇತರ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.