ಮಂಗಳೂರು : ರಾಜ್ಯ ಸರ್ಕಾರವು ದಲಿತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಸಪ್ತಪದಿ ಮಾದರಿಯಲ್ಲೇ ಶುಭಲಗ್ನ ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.
BIGG NEWS : `SC-ST’ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಶುಭಲಗ್ನ ಯೋಜನೆ ಶೀಘ್ರವೇ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶುಭಲಗ್ನಿ ಯೋಜನೆಯಿಂದ ಎಸ್ ಸಿ ಸಮುದಾಯದ ಕುಟುಂಬಗಳಿಗೆ ನೆರವಾಗಲಿದೆ ಎಂದು ತುಳಿಸಿದ್ದಾರೆ.
ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ, ಉಪಜಾತಿಗಳ ಸಮಗ್ರ ವರದಿಯನ್ನು ತರಿಸಿಕೊಂಡಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಶುಭಲಗ್ನ ಘೋಷಣೆ ಆಗಲಿದೆ. ಶುಭಲಗ್ನ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಶುಭ ಲಗ್ನ ಯೋಜನೆಯಿಂದ ಪರಿಶಿಷ್ಟ ಜಾತಿಗೆ ಸೇರಿದ 28-30 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಈ ವಿಭಾಗದಲ್ಲಿ ಹಲವು ಮಂದಿ ಆರ್ಥಿಕವಾಗಿ ದುರ್ಬಲರಾದವರಿಗೆ ನೆರವು ದೊರೆಯಲಿದೆ. ಸಪ್ತಪದಿ ಯೋಜನೆಯ ಮಾದರಿಯಲ್ಲೇ ಶುಭ ಲಗ್ನ ಯೋಜನೆಯಲ್ಲಿಯೂ ವಧು-ವರರಿಗೆ ವಸ್ತ್ರಗಳು ದೊರೆಯಲಿದೆ ಎನ್ನಲಾಗಿದೆ.