ಬೆಂಗಳೂರು : ಬಿಜೆಪಿಯ ಯುವನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಿಂದ ಆಘಾತಗೊಂಡಿದ್ದೇನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ನಮ್ಮ ಯುವನಾಯಕ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಸುದ್ದಿ ಮನಸ್ಸಿಗೆ ಆಘಾತ ನೀಡಿದೆ. ಮೃತರ ಆತ್ಮಕ್ಕೆ ಸದ್ಗತಿ ಹಾಗೂ ಅವರ ಕುಟುಂಬಕ್ಕೆ, ಬಂಧು, ಮಿತ್ರರಿಗೆ, ಪಕ್ಷದ ಕಾರ್ಯಕರ್ತರಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಮತಾಂಧರ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿಯ ಯುವನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಿಂದ ಆಘಾತಗೊಂಡಿದ್ದೇನೆ.
ಸರಕಾರ ಹಾಗೂ ಸಮಾಜ ಪ್ರವೀಣ್ ಕುಟುಂಬದ ಜತೆಗಿದೆ. ಹಿಂದುಗಳ ಒಗ್ಗಟ್ಟು ಒಡೆಯುವುದಕ್ಕೆ ಮತಾಂಧ ಶಕ್ತಿಗಳು ನಡೆಸುತ್ತಿರುವ ಇಂಥ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. pic.twitter.com/Tz0rJ1wZTJ— Sunil Kumar Karkala (@karkalasunil) July 27, 2022
ಅಷ್ಟೇ ಅಲ್ಲದೆ, ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂಥ ಪ್ರಯತ್ನಗಳಿಗೆ ನಮ್ಮ ಒಗ್ಗಟ್ಟೇ ಉತ್ತರವಾಗಿರಬೇಕು ಎಂದು ಸುನೀಲ್ ಕುಮಾರ್ ಕರೆ ಕೊಟ್ಟಿದ್ದಾರೆ. ಈಗಾಗಲೇ ವಿಶೇಷ ವಿಮಾನದ ಮೂಲಕ ಮಂಗಳೂರಿನಿಂದ ಬೆಳ್ಳಾರೆಗೆ ಸಚಿವ ಸುನೀಲ್ ಕುಮಾರ್ ಆಗಮಿಸಿ ಕುಟುಂಬಸ್ಥರಗೆ ಸಾಂತ್ವನ ತಿಳಿಸಲಿದ್ದಾರೆ.