ಕೊಲಂಬೊ : ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರನಿಲ್ ವಿಕ್ರಮಸಿಂಘೆ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ ಮತ್ತು ಶ್ರೀಲಂಕಾದ ಜನತೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
“ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ನೀವು ಆಯ್ಕೆಗೊಂಡಿರುವುದಕ್ಕೆ ನಾನು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶ್ರೀಲಂಕಾಕ್ಕೆ ನಿರ್ಣಾಯಕ ಸಮಯದಲ್ಲಿ ನೀವು ಉನ್ನತ ಹುದ್ದೆಯನ್ನ ಅಲಂಕರಿಸಿದ್ದೀರಿ. ನಿಮ್ಮ ಅಧಿಕಾರವಧಿ ಆರ್ಥಿಕ ಸ್ಥಿರತೆಯನ್ನ ಪೋಷಿಸುತ್ತದೆ ಮತ್ತು ಶ್ರೀಲಂಕಾದ ಎಲ್ಲಾ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ವಿಕ್ರಮಸಿಂಘೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಇನ್ನು “ಸ್ಥಾಪಿತ ಪ್ರಜಾಸತ್ತಾತ್ಮಕ ವಿಧಾನಗಳು, ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗಾಗಿ ಶ್ರೀಲಂಕಾದ ಜನರ ಅನ್ವೇಷಣೆಗೆ ಭಾರತವು ಬೆಂಬಲ ನೀಡುವುದನ್ನ ಮುಂದುವರಿಸುತ್ತದೆ” ಎಂದು ಅಭಿನಂದನಾ ಪತ್ರದಲ್ಲಿ ಪ್ರಧಾನಮಂತ್ರಿ ಪುನರುಚ್ಚರಿಸಿದರು.
ಇನ್ನು “ಜನರ ಪರಸ್ಪರ ಪ್ರಯೋಜನಕ್ಕಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಹಳೆಯ, ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನ ಬಲಪಡಿಸಲು ಗೌರವಾನ್ವಿತ ರನಿಲ್ ವಿಕ್ರಮಸಿಂಘೆ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿ ಅವರಿಗೆ ತಿಳಿಸಲಾಗಿದೆ” ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.
ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ವಿಕ್ರಮಸಿಂಘೆ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ಹೇಳಿದರು. “ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ಮತ್ತು ನಮ್ಮ ಎರಡೂ ದೇಶಗಳ ನಡುವಿನ ಹಳೆಯ, ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಅವ್ರು ಹೇಳಿದರು.
PM Modi assures full support to Sri Lanka in letter to President Wickremesinghe
Read @ANI Story | https://t.co/jAYenb7ZlX#NarendraModi #SriLankaCrisis #RanilWickremesinghe pic.twitter.com/WFHCfiV2W7
— ANI Digital (@ani_digital) July 26, 2022