ಇಂದೋರ್ : ಬಾಲಿವುಡ್ ನಟ ರಣವೀರ್ ಸಿಂಗ್ ಭಾರತದಲ್ಲಿ ನಿಯತಕಾಲಿಕೆಯೊಂದರ ಮುಖಪುಟಕ್ಕಾಗಿ ವಿವಾದಾತ್ಮಕ ನಗ್ನ ಫೋಟೋಶೂಟ್ ನಂತರ ಸುದ್ದಿಯಲ್ಲಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಗ್ನ ಚಿತ್ರಗಳನ್ನ ಪೋಸ್ಟ್ ಮಾಡಿದ ಮತ್ತು ‘ಮಹಿಳೆಯರ ಭಾವನೆಗಳನ್ನು ನೋಯಿಸಿದ’ ಆರೋಪದ ಮೇಲೆ ನಟನ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನು ಹಲವಾರು ಎಫ್ಐಆರ್ಗಳು ಸಹ ದಾಖಲಿಸಲಾಗಿದೆ.
‘ಪದ್ಮಾವತ್’ ನಟನನ್ನ ಸಾಮಾಜಿಕ ಮಾಧ್ಯಮದಲ್ಲಿ ಕ್ರೂರವಾಗಿ ಟ್ರೋಲ್ ಮಾಡಲಾಗ್ತಿದೆ. ಹೀಗಿರುವಾಗ ಇಂದೋರ್ನ ಎನ್ಜಿಒವೊಂದು ಅವರಿಗಾಗಿ ಬಟ್ಟೆ ದೇಣಿಗೆ ಅಭಿಯಾನವನ್ನ ಆಯೋಜಿಸುವ ಮೂಲಕ ರಣವೀರ್ ಫೋಟೋಶೂಟ್ ವಿರೋಧಿಸಿದೆ.
‘ನೇಕಿ ಕಿ ದೀವಾರ್’ ಎಂಬ ಸಾಮಾಜಿಕ ಸಂಸ್ಥೆ ಹಳೆಯ ಬಟ್ಟೆಗಳನ್ನ ರಣವೀರ್ ಸಿಂಗ್ ಅವರಿಗೆ ದಾನ ಮಾಡುವ ಪ್ರಯತ್ನದಲ್ಲಿ ಜನರಿಂದ ಬಟ್ಟೆ ಸಂಗ್ರಹಿಸಿದೆ. ಇನ್ನು ಎನ್ಜಿಒ ಬಟ್ಟೆಗಳನ್ನ ಸಂಗ್ರಹಿಸುವ ವೀಡಿಯೊ ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ.
ಪ್ರತಿಭಟನಾಕಾರರು ಪೆಟ್ಟಿಗೆಯೊಂದಕ್ಕೆ “ಮೇರೆ ಸ್ವಚ್ಛ ಇಂದೋರ್ ನೇ ಥಾನಾ ಹೈ, ದೇಶ್ ಸೆ ಮನ್ಸಿಕ್ ಕಚ್ರಾ ಭಿ ಹತಾನಾ ಹೈ (ಇಂದೋರ್ ದೇಶದಿಂದ ಮಾನಸಿಕ ತ್ಯಾಜ್ಯವನ್ನು ತೆಗೆದುಹಾಕಲು ನಿರ್ಧರಿಸಿದೆ) ಎಂಬ ಬ್ಯಾನರ್ ಹಾಕಿ ಜನರಿಂದ ಬಟ್ಟೆ ಸಂಗ್ರಹಿಸುತ್ತಿದ್ದಾರೆ.
ಇನ್ನು ಇದೇ ವೇಳೆ ರಣವೀರ್ ಸಿಂಗ್ ಒಬ್ಬ ಯೂತ್ ಐಕಾನ್ ಮತ್ತು ಸಾಕಷ್ಟು ಅನುಯಾಯಿಗಳನ್ನ ಹೊಂದಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಈ ರೀತಿಯ ಫೋಟೋಶೂಟ್ ‘ಅಗ್ಗದ ಜನಪ್ರಿಯತೆ’ ಮತ್ತು ‘ಇಂದಿನ ಯುವಕರ ಮೇಲೆ ಪರಿಣಾಮ ಬೀರಬಹುದು’ ಎಂದು ತೋರಿಸುತ್ತದೆ. ಇದು ಕಡಿಮೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.