ಜಾರ್ಖಂಡ್ : ಹದಿಹರೆದ ಬಾಲಕಿಯೋರ್ಳನ್ನು ಅಪರಿಚಿತ ಮೂವರು ವ್ಯಕ್ತಿಗಳು ಅಪಹರಿಸಿ, ಆಕೆಯ ಮೇಲೆ ಮೂರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ವೆಸಗಿರುವ ಆಘಾತಕಾರಿ ಘಟನೆ ಜಾರ್ಖಂಡ್ ಬೊಕಾರೊ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
BIGG NEWS : ನಾವು ಗಾಂಧಿ ಕುಟುಂಬಕ್ಕೆ ಗುಲಾಮರಂತೆ ಕೆಲಸ ಮಾಡುತ್ತೇವೆ : ಬಿಜೆಪಿಗೆ ಡಿ.ಕೆ.ಶಿವಕುಮಾರ್ ತಿರುಗೇಟು
ಅಪಹರಿಸಿ ಬಾಲಕಿಯನ್ನು ವ್ಯಕ್ತಿಗಳು ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಿದ್ದರು. ಇದನ್ನು ಪ್ರತಿಭಟಿಸಲು ಬಾಲಕಿ ಯತ್ನಿಸಿದಾಗ ಆಕೆಗೆ ತೀವ್ರವಾಗಿ ಥಳಿಸಲಾಗಿದೆ. ಜುಲೈ 19 ರಂದು, ಬಾಲಕಿ ಕಾಮುಕರಿಂದ ತಪ್ಪಿಸಿಕೊಂಡು ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಅಪ್ರಾಪ್ತ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳನ್ನು ಮನೋಜ್ ಕುಮಾರ್, ವಿಷ್ಣು ಕುಮಾರ್ ಮತ್ತು ಮಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಏಪ್ರಿಲ್ 20 ರಂದು ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ವೇಳೆ ಕಾಮುಕರು ಬಾಲಕಿಯನ್ನು ಅಪಹರಿಸಿದ್ದರು. ಆರೋಪಿಗಳಲ್ಲಿ ಒಬ್ಬನಾದ ಮಂತೋಷ್ ಕುಮಾರ್ ಆಟೋ ಚಾಲಕನಾಗಿದ್ದು, ಇನ್ನಿಬ್ಬರು ಆರೋಪಿಗಳ ಸಹಾಯದಿಂದ ಬಾಲಕಿಯನ್ನು ಅಪಹರಿಸಿದ್ದಾರೆ ಎನ್ನಲಾಗುತ್ತಿದೆ.
BREAKING NEWS : ʻ ಕಬಡ್ಡಿ ಆಟ ʼ ಆಡುವ ಮುನ್ನಎಚ್ಚರ..! ಕಬಡ್ಡಿಪಂದ್ಯದ ವೇಳೆಯೇ, ಹೃದಯಘಾತದಿಂದ ʻ ಆಟಗಾರ ಸಾವು ʼ
ಈ ಮೂವರು ಬಾಲಕಿಯನ್ನು ಕೊಠಡಿಯಿಂದ ಹೊರಗೆ ಹೋಗುವಾಗಲೆಲ್ಲಾ ಪ್ರತ್ಯೇಕ ಸ್ಥಳದ ಕೋಣೆಯಲ್ಲಿ ಬೀಗ ಹಾಕುತ್ತಿದ್ದರು. ಆದರೆ ಜುಲೈ 19 ರಂದು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಬಾಲಕಿಯ ಸ್ಥಿತಿಯನ್ನು ನೋಡಿ ಕಲ್ಲಿನ ಸಹಾಯದಿಂದ ಬಾಗಿಲನ್ನು ತೆರೆದರು. ಆಗ ಅಪ್ರಾಪ್ತ ಬಾಲಕಿ ತನ್ನ ಮನೆಗೆ ಓಡಿ ಹೋಗಿ ನಡೆದ ಘಟನೆಯನ್ನೆಲ್ಲ ಪೋಷಕರಿಗೆ ಹೇಳಿದ್ದಾಳೆ. ಸದ್ಯಕ್ಕೆ ಆರೋಪಿಗಳೆಲ್ಲ ತಲೆಮರೆಸಿಕೊಂಡಿದ್ದು, ಮೂವರನ್ನೂ ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ.
ಇದಕ್ಕೂ ಮೊದಲು ಬಾಲಕಿಯ ಮನೆಯವರು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗುತ್ತಿದೆ.
BIG BREAKING NEWS: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ : ಆಗಸ್ಟ್ 10 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್