ಕೆಎನ್ಎನ್ ಡಿಜಿಟಲ್ ಡೆಸ್ಕ್ : ಫುಡ್ ಡೆಲಿವರಿ ಆ್ಯಪ್ನಲ್ಲಿ ನೀವು ಆರ್ಡರ್ ಮಾಡಿದ ತಿಂಡಿಗಳಿಗಾಗಿ ಕಾಯುತ್ತಿರುತ್ತೀರಿ. ಆದ್ರೆ, ಫುಡ್ ಡೆಲಿವರಿ ಮಾಡುವ ವ್ಯಕ್ತಿ ತಾನು ಬರುವ ಹಾದಿಯಲ್ಲಿ ಎಂತಹ ಪರಿಸ್ಥಿತಿಯನ್ನೆದುರಿಸಿ ಬರುತ್ತಾನೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ದೃಶ್ಯ ವೈರಲ್ ಆಗುತ್ತಿದ್ದು, ಎಂಥಹವರ ಕಣ್ಣಂಚಲ್ಲೂ ನೀರು ಬರಿಸುವಂತಿದೆ.
ಇಲ್ಲೊಬ್ಬ ಸ್ವಿಗ್ಗಿ ಡೆಲಿವರಿ ಬಾಯ್ ತನಗೆ ಬಂದ ಆರ್ಡರ್ಅನ್ನು ತಲುಪಿಸಲು ಭಾರೀ ಮಳೆಯ ನಡುವೆಯೂ ಬೈಕ್ನಲ್ಲಿ ಟ್ರ್ಯಾಫಿಕ್ನಲ್ಲಿ ಸಿಲುಕಿ ಕಾಯುತ್ತಿರುವ ದೃಶ್ಯವೊಂದು ಕಂಡುಬಂದಿದೆ. ವಿಡಿಯೋದಲ್ಲಿ ಜೋರು ಮಳೆ ಬರುತ್ತಿರುವ ಮಧ್ಯೆ ಟ್ರ್ಯಾಫಿಕ್ನಲ್ಲಿ ಸಿಲುಕಿದ್ದ ಡೆಲಿವರಿ ಬಾಯ್ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ರೀತಿಯ ರೈನ್ಕೋಟ್ ಧರಿಸಿಲ್ಲದನ್ನು ನೋಡಬಹುದು.
View this post on Instagram
ಇನ್ಸ್ಟಾಗ್ರಾಮ್ ಬಳಕೆದಾರ ದಿನೇಶ್ ಕೊಮ್ಮಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಈಗಾಗಲೇ ಸುಮಾರು 5 ಮಿಲಿಯನ್ ವೀಕ್ಷಣೆಯಾಗಿದೆ. ಆದ್ರೆ, ಈ ವಿಡಿಯೋ ಎಲ್ಲಿ ರೆಕಾರ್ಡ್ ಆಗಿರುವ ಸ್ಥಳ ಯಾವುದು ಎಂಬುದು ಸ್ಪಷ್ಟವಾಗಿಲ್ಲ.
Breaking news: ನ್ಯಾಷನಲ್ ಹೆರಾಲ್ಡ್ ಪ್ರಕರಣ: 2ನೇ ಸುತ್ತಿನ ವಿಚಾರಣೆಗಾಗಿ ಇಡಿ ಕಚೇರಿಗೆ ಆಗಮಿಸಿದ ʻಸೋನಿಯಾ ಗಾಂಧಿʼ
BIGG BREAKING NEWS : ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ನಂತರ ಪ್ರತ್ಯಕ್ಷ!