ಧಾರವಾಡ : ಭಾರತ ಸರ್ಕಾರವು ಪ್ರಿ-ಮೆಟ್ರಿಕ್, ಪೋಸ್ಟ್-ಮೆಟ್ರಿಕ್ ಹಾಗೂ ಟಾಪ್-ಕ್ಲಾಸ್ ಶಿಕ್ಷಣ ಪಡೆಯುವಂತಹ ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲು ಅರ್ಜಿ ಆಹ್ವಾನಿಸಿದೆ.
Good News : ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ ನಲ್ಲಿ `ಕ್ಷೀರ ಸಮೃದ್ಧಿ ಬ್ಯಾಂಕ್’ ಆರಂಭ
ಜಿಲ್ಲೆಯಲ್ಲಿನ ವಿಕಲಚೇತನ ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಜಿಗಳನ್ನು ಆನ್ಲೈನ್ ವೆಬ್ಸೈಟ್ www.scholarship.gov.in ನಲ್ಲಿ ಸಲ್ಲಿಸಬಹುದು. ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ಮತ್ತು ಪೋಸ್ಟ್-ಮೆಟ್ರಿಕ್ ಹಾಗೂ ಟಾಪ್-ಕ್ಲಾಸ್ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳು ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು(ಎಂ.ಆರ್.ಡಬ್ಲ್ಯೂ)ಗಳಾದ ಧಾರವಾಡ-9742757903, ಹುಬ್ಬಳ್ಳಿ-9164347001, 8073194053 ಕಲಘಟಗಿ-6363695794, ನವಲಗುಂದ-9663271200 ಮತ್ತು ಕುಂದಗೋಳ-8880570833 ಹಾಗೂ ಕಛೇರಿ ದೂರವಾಣಿ ಸಂಖ್ಯೆ:0836-2744474 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.