ಸುಬ್ರಹ್ಮಣ್ಯ : ರಾಜ್ಯದ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಾಲ ಸೌಲಭ್ಯಕ್ಕಾಗಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಯೋಜನೆಯನ್ನು ಅಕ್ಟೋಬರ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚವಿ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
BREAKING NEWS : 10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ` ಸೂಲಗಿತ್ತಿ ಸುಲ್ತಾನ್ ಬಿ’ ಇನ್ನಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 26 ಲಕ್ಷ ರೈತರು ಡೇರಿಗಳಿಗೆ ಹಾಲನ್ನು ಪೂರೈಸುತ್ತಿದ್ದಾರೆ. ಈ ಹೈನುಗಾರರ ವಿಶೇಷ ಉಪಯೋಗಕ್ಕಾಗಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಆರ್ ಬಿಐ ಗೆ ಈ ಬಗ್ಗೆ ಪೂರಕ ಮಾಹಿತಿ ಮತ್ತು ದಾಖಲೆ ನೀಡಲಾಗಿದ್ದು, ನಬಾರ್ಡ್ ನಿಂದ ಅಗತ್ಯ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.