ಘಾಜಿಯಾಬಾದ್(ಉತ್ತರ ಪ್ರದೇಶ): ಅನೈತಿಕ ಸಂಬಂಧದ ಶಂಕೆಯ ಅನುಮಾನದಿಂದ ವಿಧವೆ ಸೊಸೆಯನ್ನು ಸೋದರ ಮಾವನೊಬ್ಬ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಟ್ವಿಂಕಲ್ ಎಂದು ಗುರುತಿಸಲಾಗಿದೆ. ಟ್ವಿಂಕಲ್ ಮೀರತ್ ಜಿಲ್ಲೆಯ ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದ ನಿವಾಸಿ ಗೌರವ್ ಅವರನ್ನು 2017 ರಲ್ಲಿ ವಿವಾಹವಾಗಿದ್ದರು. ಅವರ ಪತಿ 2021 ರಲ್ಲಿ ಟ್ರಕ್ ಅಪಘಾತದಲ್ಲಿ ನಿಧನರಾದರು.
ಇದಾದ ಕೆಲವು ದಿನಗಳ ಬಳಿಕ ಆಕೆ ಪದೇ ಪದೇ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಕಂಡ ಅಭಿಷೇಕ್ಗೆ ಆಕೆಯ ಮೇಲೆ ಅನುಮಾನ ಮೂಡತೊಡಗಿತು.
ಭಾನುವಾರ ರಾತ್ರಿ ಆತ ಟ್ವಿಂಕಲ್ ಮಲಗಿದ್ದ ಕೋಣೆಗೆ ಹೋಗಿ, ಆಕೆಯನ್ನು ಮನಬಂದಂತೆ ಸುತ್ತಿಗೆಯಿಂದ ಹೊಡೆದು ದೇಹವನ್ನು ಹಲವು ಕಡೆ ಸೀಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಅಭಿಷೇಕ್ನನ್ನು ಬಂಧಿಸಲಾಗಿದ್ದು, ತನಿಖೆಯ ವೇಳೆ ಸತ್ಯಾಂಶ ಬಯಲಾಗಿದೆ. ಇನ್ನೂ, ಟ್ವಿಂಕಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Commonwealth Games 2022: ʻಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ…
BIGG NEWS : ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು `ಇ-ಕೆವೈಸಿ’ ಮಾಡಲು ಜುಲೈ 31 ಕೊನೆಯ ದಿನ