ಮೈನ್ಪುರಿ(ಉತ್ತರ ಪ್ರದೇಶ): ಸಾವು ಹೇಗೆ ಸಂಭವಿಸುತ್ತದೆ ಎಂದು ಯಾರಿಗೂ ತಿಳಿಸಿರುವುದಿಲ್ಲ. ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದ ಯುವತಿ ಸದ್ದಿಲ್ಲದೇ ಕೊನೆಯುಸಿರೆಳೆದಿದ್ದಾಳೆ.
ಹೌದು, ಉತ್ತರ ಪ್ರದೇಶದ ಘಿರೋರ್ನ ಆಲಾಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಗ್ನಿವೀರ್ ನೇಮಕಾತಿಗೋಸ್ಕರ ಈಗಾಗಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ ಅಲಾಲ್ಪುರ ಗ್ರಾಮದ ನಿವಾಸಿ ಸುರೇಶ್ ಚೌಹಾಣ್ ಅವರ ಪುತ್ರಿ 18 ವರ್ಷದ ಶ್ವೇತಾ ಚೌಹಾಣ್ ಕೂಡ ಒಬ್ಬಳು. ಈಕೆ ಭಾನುವಾರ ಬೆಳಗ್ಗೆ ತನ್ನ ದೈಹಿಕ ಪರೀಕ್ಷೆಯ ತಯಾರಿಗೋಸ್ಕರ ಓಡಲು ಹೋಗಿದ್ದಳು. ಈ ವೇಳೆ ಅಲ್ಲೇ
ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ದಾರಿಯಲ್ಲಿ ಬಿದ್ದಳು. ಕುಟುಂಬದವರು ಕೂಡಲೇ ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಈಗಾಗಲೇ ಈಕೆ ಮೃತಪಟ್ಟಿದ್ದಾರೆ ಎಂದು
ವೈದ್ಯರು ಘೋಷಿಸಿದರು.
ನಂತ್ರ, ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳದ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆ ನಡೆಸದೇ, ಶವವನ್ನು ಸುಟ್ಟುಹಾಕಿದರು. ಶ್ವೇತಾ ಹಿರಿಯ ಮಗಳಾಗಿದ್ದು, ಆಕೆಗೆ ಒಬ್ಬ ತಂಗಿ ಮತ್ತು ಸಹೋದರ ಇದ್ದಾನೆ.
ಅಗ್ನಿವೀರಳಾಗಲು ನಡೆಯುತ್ತಿತ್ತು ಸಿದ್ಧತೆ
ಶ್ವೇತಾ ಪ್ರತೀ ದಿನ ಬೆಳಗ್ಗೆ ಎದ್ದು ದೈಹಿಕ ಪರೀಕ್ಷೆಗಾಗಿ ಓಡುತ್ತಿದ್ದಳು. ಅಂತೆಯೇ ವಿಧ್ಯಾಭ್ಯಾಸವನ್ನೂ ಸಹ ಮಾಡುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ ಘಿರೋರ್ ಬೈಪಾಸ್ ರಸ್ತೆಗೆ ಓಡಲು ಹೋಗುತ್ತಿದ್ದ ಅವಳು ಭಾನುವಾರವೂ ಓಡುವ ಅಭ್ಯಾಸಕ್ಕೆ ಹೋಗುತ್ತಿದ್ದಳು. ಆದರೆ, ಓಡುತ್ತಿರುವಾಗ ಏಕಾಏಕಿ ಬಿದ್ದು ಮೃತಪಟ್ಟಿದ್ದಾಳೆ ಎಂಬುದು ಗೊತ್ತಾಗಿಲ್ಲ. ಈ ಘಟನೆಯ ನಂತರ ಕುಟುಂಬದ ಸ್ಥಿತಿ ಹದಗೆಟ್ಟಿದೆ. ಮನೆಯ ಇತರ ಮಕ್ಕಳೂ ಶ್ವೇತಾಳನ್ನು ನೋಡಿದ ನಂತರವೇ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಎಂದು ಕುಟುಂಬದವರು ಹೇಳಿದರು. ಆದರೆ, ಶ್ವೇತಾ ಅವರ ಈ ರೀತಿಯ ಅಕಾಲಿಕ ಮರಣದ ನಂತರ ಅವರೂ ಸಂಪೂರ್ಣವಾಗಿ ದುಃಖದಲ್ಲಿ ಮುಳುಗಿದ್ದಾರೆ.
ರಾಜ್ಯ ಸರ್ಕಾರ ‘ಬಿಪಿಎಲ್ ಕಾರ್ಡ್ ಅಕ್ರಮ’ದ ನೆಪದಲ್ಲಿ ಕಡುಬಡವರಿಗೆ ಕಿರುಕುಳ: ‘ಸಿಟಿಜನ್ ರೈಟ್ಸ್’ ಕಿಡಿ