ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ \ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿ ಮಿತಿಯನ್ನ 80 ರಿಂದ 100ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ, “ಕಾಲೇಜಿನಲ್ಲಿ ಹೆಚ್ಚುವರಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತ ಪಡಿಸಿಕೊಂಡು ಆಗತ್ಯತೆ ಹಾಗೂ ಬೇಡಿಕೆಯಾನುಸಾರ, ಮಂಜೂರಾತಿ ಪಡೆದು ಪ್ರಸ್ತುತ ಭೋಧಿಸುತ್ತಿರುವ ಒಂದು ವಿಭಾಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಪಡೆಯುಲು ಅವಕಾಶ ಕಲ್ಪಸಿ ಆದೇಶಿಸಲಾಗಿತ್ತು. ಇನ್ನು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಪ್ರತಿ ಸಂಯೋಜನೆಯ 2ನೇ ವಿಭಾಗಕ್ಕೂ ಹೆಚ್ಚುವರಿ 20 ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಲಾಗಿದೆ” ಎಂದಿದೆ.
ಅದ್ರಂತೆ ಪ್ರತಿ ಸಂಯೋಜನೆಯ ಗರಿಷ್ಠ 2 ವಿಭಾಗಕ್ಕೆ ಮಾತ್ರ ಪ್ರಥಮ ಪಿಯುಸಿಗೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಅನುಮತಿಸಿದೆ.