ನವದೆಹಲಿ : ಆಮ್ರಪಾಲಿ ಗ್ರೂಪ್ ಜೊತೆಗಿನ ವಹಿವಾಟಿನ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅಂದ್ಹಾಗೆ, ಆಮ್ರಪಾಲಿ ಗ್ರೂಪ್ ಮತ್ತು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ಈ ಪ್ರಕರಣವು ಈ ಹಿಂದೆ ದೆಹಲಿ ಹೈಕೋರ್ಟ್ನಲ್ಲಿ ನಡೆಯುತ್ತಿತ್ತು, ಅಲ್ಲಿ ಹೈಕೋರ್ಟ್ ಸಮಿತಿಯನ್ನ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ವೀಣಾ ಬೀರಬಲ್ ನೇತೃತ್ವದ ಈ ಸಮಿತಿಯು ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ಹೊಂದಿತ್ತು.
ಸಮಿತಿ ರಚನೆಯಾದ ಬಳಿಕವೇ ಸಂತ್ರಸ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ, ಆಮ್ರಪಾಲಿ ಗ್ರೂಪ್ಗೆ ಹಣದ ಕೊರತೆಯಿದೆ ಎಂದು ಸಂತ್ರಸ್ತರ ಪರವಾಗಿ ವಾದಿಸಲಾಗಿದೆ, ಆದ್ದರಿಂದ ಅವರು ಬುಕ್ ಮಾಡಿದ ಫ್ಲ್ಯಾಟ್ಗಳು ಲಭ್ಯವಿಲ್ಲ ಎಂದಿದ್ದರು.
ದೆಹಲಿ ಹೈಕೋರ್ಟ್ ರಚಿಸಿರುವ ಸಮಿತಿಯ ಮುಂದೆ ಮಹೇಂದ್ರ ಸಿಂಗ್ ಧೋನಿ 150 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತರು ಹೇಳುತ್ತಾರೆ. ಮಹೇಂದ್ರ ಸಿಂಗ್ ಧೋನಿ ಆಮ್ರಪಾಲಿ ಗ್ರೂಪ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಇದಕ್ಕಾಗಿ ಅವರು 150 ಕೋಟಿ ಪಡೆಯಲಿದ್ದಾರೆ. ಇದೀಗ ಎಂಎಸ್ ಧೋನಿಯ ಬಾಕಿ ಪಾವತಿಸಲು ಆಮ್ರಪಾಲಿ ಗ್ರೂಪ್ ಹಣ ವ್ಯಯಿಸಿದರೆ ಅವ್ರ ಫ್ಲಾಟ್ಗಳು ಲಭ್ಯವಾಗುವುದಿಲ್ಲ ಎಂದು ಸಂತ್ರಸ್ತರ ಪರವಾಗಿ ವಾದಿಸಲಾಗಿದೆ.
ಈ ಸಂಬಂಧ ಇದೀಗ ಸುಪ್ರೀಂಕೋರ್ಟ್ ಮಹೇಂದ್ರ ಸಿಂಗ್ ಧೋನಿ ಮತ್ತು ಆಮ್ರಪಾಲಿ ಗ್ರೂಪ್ಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಪರ ಹಾಜರುಪಡಿಸುವಂತೆ ಸೂಚಿಸಿದೆ. ಆದರೆ, ಮಧ್ಯಸ್ಥಿಕೆ ಸಮಿತಿಯ ವಿಚಾರಣೆ ಅಥವಾ ಯಾವುದೇ ರೀತಿಯ ಕ್ರಮಕ್ಕೆ ಸುಪ್ರೀಂಕೋರ್ಟ್ ಇನ್ನೂ ತಡೆ ನೀಡಿಲ್ಲ.