ಬೆಂಗಳೂರು : ಸಧ್ಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿಯಲಿದೆ ಎಂದು ಸಚಿವ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ” ಕರ್ನಾಟಕದ ಜನರು ಜಾತೀಯತೆ ರಾಜಕಾರಣವನ್ನ ಪ್ರೋತ್ಸಾಹಿಸುವುದಿಲ್ಲ. ಕರ್ನಾಟಕ ಕಾಂಗ್ರೆಸ್ʼನಲ್ಲಿ ಆಂತರಿಕ ಕಚ್ಚಾಟವಿದೆ. ಪಂಜಾಬಿನಂತೆಯೇ ಇಲ್ಲಿಯೂ ನಡೆಯುತ್ತಿದೆ. ಇನ್ನು ಅವರು (ಕಾಂಗ್ರೆಸ್) ಯಾವುದೇ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಮುಂಬರುವ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯಲಿದ್ದಾರೆ” ಎಂದರು.
People of Karnataka will not encourage casteism politics. There is an internal fight within Karnataka Congress. Same thing like of Punjab is happening here. As opp, they (Congress) haven't visited any flood-affected area. They'll come third in coming polls: Karnataka Min, R Ashok pic.twitter.com/GNh4Ehx5KJ
— ANI (@ANI) July 25, 2022