ಹಿಮಾಚಲ ಪ್ರದೇಶ: ಇಲ್ಲಿನ ರೈತನೊಬ್ಬನಿಗೆ ತನ್ನ ಜಮೀನಿನಲ್ಲಿ ಒಂದು ಮೊಟ್ಟೆ ಸಿಕ್ಕಿದೆ. ಆದ್ರೆ, ಅದರ ವಾಸ್ತವ ತಿಳಿದು ದಂಗಾಗಿದ್ದಾನೆ.
ಹೌದು, ಮಂಡಿ ಜಿಲ್ಲೆಯ ಗೋಹರ್ ಉಪವಿಭಾಗದಲ್ಲಿರುವ ಸಾಲೋಯ್ ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಅವರು ಕಾಡಿನಲ್ಲಿ ಹುಲ್ಲು ಕತ್ತರಿಸುವಾಗ ಮರದ ಮೇಲೆ ಕಲ್ಲಿನಂತೆ ಗಟ್ಟಿಯಾದ ಮೊಟ್ಟೆಯೊಂದು ಸಿಕ್ಕಿದೆ. ಮೊದಮೊದಲು ಇದು ಸಾಮಾನ್ಯ ಹಕ್ಕಿಯ ಮೊಟ್ಟೆ ಎಂದು ಭಾವಿಸಿದ ಮಹೇಂದ್ರ, ಮರದಿಂದ ಮೊಟ್ಟೆಯನ್ನು ಕೆಳಕ್ಕೆ ಇಳಿಸಿದ್ದಾನೆ. ಈ ವೇಳೆ ಅದರ ಮೇಲೆ ಒಂದೇ ಒಂದು ಗೀರು ಇರಲಿಲ್ಲ. ಅದನ್ನು ಪರೀಕ್ಷಿಸಲು ಕಲ್ಲಿನ ಮೇಲೆ ಬಲವಾಗಿ ಹೊಡೆದನು, ಆಗಲೂ ಅದು ಒಡೆಯಲಿಲ್ಲ.
ಇದನ್ನು ನೋಡಿದ ಮಹೇಂದ್ರಕುಮಾರ್ ಆಶ್ಚರ್ಯಚಕಿತರಾದರು. ಈ ಮೊಟ್ಟೆಯ ಬಗ್ಗೆ ತನ್ನ ಮನೆಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿದರು. ಈ ಮೊಟ್ಟೆಯು ಥೇಟ್ ಕೋಳಿಯ ಮೊಟ್ಟೆಯಂತೆಯೇ ಇತ್ತು. ನಂತರ ಮಹೇಂದ್ರ ಕುಮಾರ್ ಅದರ ಮೊಟ್ಟೆಯ ಬಗ್ಗೆ ಗೋಹರ್ನಲ್ಲಿರುವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಮೊಟ್ಟೆಯೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಗೆ ತಲುಪಿದರು. ಈ ಮೊಟ್ಟೆಯು ದೊಡ್ಡ ಹಕ್ಕಿಯದ್ದಾಗಿರಬಹುದು ಎಂದು ಆರಂಭದಲ್ಲಿ ನಂಬಲಾಗಿತ್ತು.
ಆದರೆ, ಈ ವಿಷಯ ಚಾಲ್ಚೌಕ್ನ ಭದ್ರೋಣ ನಿವಾಸಿ ಪ್ರೀತಮ್ಗೆ ತಲುಪಿದಾಗ, ಅವರು ಪಶು ಆಸ್ಪತ್ರೆಗೆ ತಲುಪಿ ಇದು ಮೊಟ್ಟೆಯಲ್ಲ, ʻಶಾಲಿಗ್ರಾಮ್ʼ ಎಂದು ಹೇಳಿದ್ದಾರೆ. ಈ ಶಾಲಿಗ್ರಾಮವನ್ನು ತಮ್ಮ ಮನೆಯ ತುಳಸಿ ಗಿಡದ ಬಳಿ ಇಡಲಾಗಿತ್ತು. ಯಾವುದೋ ಹಕ್ಕಿ ಅದನ್ನು ಅಲ್ಲಿಂದ ಎತ್ತಿಕೊಂಡು ಬಂದು ಮರದ ಮೇಲೆ ಬಿಟ್ಟಿದೆ ಎಂದು ತಿಳಿಸಿದರು. ಈ ನಿಗೂಢ ಮೊಟ್ಟೆಯ ನೈಜತೆ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ.
BIGG NEWS: ದಯವಿಟ್ಟು ನನ್ನನ್ನು ರಕ್ಷಿಸಿ’: ಇನ್ಸ್ಟಾಗ್ರಾಮ್ ನಲ್ಲಿ ಸಹಾಯ ಕೋರಿದ ಊರ್ವಶಿ ರೌಟೇಲಾ..! ಯಾಕೆ ಗೊತ್ತಾ?
BREAKING NEWS : ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ವಾಯುಪಡೆಯ ಸಣ್ಣ ತರಬೇತಿ ವಿಮಾನ ಪತನ : ಪೈಲಟ್ಗೆ ಗಂಭೀರ ಗಾಯ
BREAKING NEWS: ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ‘ಪೊಲೀಸರ ಹೊಯ್ಸಳ ವಾಹನ’