ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧ ಪಡೆದ ಮೈಸೂರಿನಲ್ಲಿ ಹೊಸ ಖತರ್ನಾಕ್ ಕೃತ್ಯವೊಂದು ಬಯಲಾಗಿದ್ದು, ಕೃಷಿಯನ್ನೇ ನಾಶ ಪಡೆಸೋದಕ್ಕೆ ಮುಂದಾಗಿದ್ದಾರೆ ಎಂದರೆ ತಪ್ಪಗಲಾರದು. ಅರೇ ಏನ್ ಅಂತಾ ಯೋಚಿಸ್ತಿದ್ದೀರಾ ಇಲ್ಲಿದೆ ಓದಿ
ಮೈಸೂರು ಜಿಲ್ಲೆಯ ಮಂಡಕಳ್ಳಿ ಗ್ರಾಮದ ಹೊರವಲಯದಲ್ಲಿ ಖಾಲಿ ಕೋಳಿ ಫಾರಂನಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಘಟಕ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮೈಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ನಕಲಿ ರಸಗೊಬ್ಬರ ತಯಾರಿ ನಡೆಸ್ತಿರುವುದು ಪತ್ತೆಯಾಗಿದೆ.
ಖಾಲಿ ಕೋಳಿಫಾರಂನಲ್ಲಿ ಅಸಲಿ ರಸಗೊಬ್ಬರ ಜೊತೆಗೆ ಜೇಡಿ ಮಣ್ಣಿನ ಕಾಳಿನ ಮಾದರಿಯ ಮಣ್ಣನ್ನು ಬೆರೆಸಿ ನಕಲಿ ರಸಗೊಬ್ಬರ ತಯಾರಿಕೆ ಮಾಡುತ್ತಿರುವುದು ಕಂಡು ಬಂದಿದೆ.
ಸದ್ಯ ಗೊಬ್ಬರ ತಯಾರಿಕೆಯ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಕಲಿ ರಸಗೊಬ್ಬರ ತಯಾರಿಕಾ ಘಟಕ ನಡೆಸುತ್ತಿದ್ದ ಆರೋಪಿ ಮಹೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.