ಹಿಮಾಚಲ ಪ್ರದೇಶ : ಇಂದು ನಗರದಲ್ಲಿ ಮೇಘಸ್ಫೋಟದಿಂದಾಗಿ ಉಂಟಾದ ಹಠಾತ್ ಪ್ರವಾಹದಲ್ಲಿ ಸೋಲಾಂಗ್ನಿಂದ ಹಿಮಾಚಲ ಪ್ರದೇಶದ ಮನಾಲಿಗೆ ಸಂಪರ್ಕ ಕಲ್ಪಿಸುವ ಮರದ ಸೇತುವೆ ಕೊಚ್ಚಿ ಹೋಗಿದೆ. ಮನಾಲಿಯ ಪಲ್ಚನ್ ಸೆರಿ ನಲ್ಲ ಎಂಬಲ್ಲಿ ಮೇಘಸ್ಫೋಟ ಸಂಭವಿಸಿದೆ.
ಮೇಘಸ್ಫೋಟದಲ್ಲಿ ಯಾವುದೇ ಜೀವ ಹಾನಿ ವರದಿಯಾಗಿಲ್ಲ. ನದಿ ತೀರಾದಿಂದ ದೂರ ಉಳಿಯುವಂತೆ ಅಧಿಕಾರಿಗಳು ಜನರಿಗೆ ಆಡಳಿತ ಎಚ್ಚರಿಕೆ ನೀಡಿದೆ.
#WATCH | After heavy rainfall through the night, the water levels of Beas river flowing next to Manali in Himachal Pradesh rise. Visuals from Vashisht Chowk of Manali pic.twitter.com/1GbjG8C45U
— ANI (@ANI) July 25, 2022
ಮೇಘಸ್ಫೋಟದಿಂದಾಗಿ ಬಿಯಾಸ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದೇ ವೇಳೆ ಬಿಯಾಸ್ ನದಿಯ ದಡದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದೆ ಎನ್ನಲಾಗುತ್ತಿದೆ.