ದೆಹಲಿ: ಇಂದು ʻದ್ರೌಪದಿ ಮುರ್ಮು(Draupadi Murmu)ʼ ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸಿಜೆಐ ರಮಣ ಅವರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ನಿರ್ಗಮಿತ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಗಣ್ಯರು ಭಾಗಿಯಾಗಿದ್ದಾರೆ.
ನೂತನ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರ ಭಾಷಣ ಪ್ರಾರಂಭವಾಗಿದ್ದು, ʻಮಹಿಳಾ ಸಬಲೀಕರಣವೇ ನನ್ನ ಮೊದಲ ಆದ್ಯತೆʼ ಎಂದಿದ್ದಾರೆ. ಅಷ್ಟೇ ಅಲ್ಲದೇ, ಭಾರತದ ವಿಕಾಸ ಯಾತ್ರೆಯ ವೇಗ ಹೆಚ್ಚಿಸಬೇಕು. ಸ್ವಾತಂತ್ರ್ಯ ಅಮೃತೋತ್ಸವ ಹೊತ್ತಲ್ಲಿ ಇದು ಹೊಸ ಚರಿತ್ರೆ. ನಾನು ಜನತೆಯ ಆಶೋತ್ತರಗಳನ್ನು ಎತ್ತಿ ಹಿಡಿಯುತ್ತೇನೆ. ಬಡವರ ಕನಸು ನನಸು ಮಾಡಲು ಬದ್ಧವಾಗಿರುವೆ ಎಂದಿದ್ದಾರೆ.
Satisfying to me that the people who were devoid of development for years -the poor, Dalits, backward, the tribals- can see me as their reflection. My nomination has blessings of the poor behind it, it’s a reflection of the dreams &capabilities of crores of women: President Murmu pic.twitter.com/b2IJ8lcLOC
— ANI (@ANI) July 25, 2022
ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ ಮುರ್ಮು.
Reaching the Presidential post is not my personal achievement, it is the achievement of every poor in India. My nomination is evidence that the poor in India can not only dream but also fulfill those dreams:
President Droupadi Murmu(Source: Sansad TV) pic.twitter.com/eYn6stmgWe
— ANI (@ANI) July 25, 2022
ಉತ್ತರ ಕನ್ನಡ ಜನತೆಯ ಬೆಂಬಲಕ್ಕೆ ನಿಂದ ಮಾಜಿ ಸಿಎಂ ಕುಮಾರಸ್ವಾಮಿ: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಆಗ್ರಹ