ನವದೆಹಲಿ: ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗಗಳಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ಬೆಲೆಯಲ್ಲಿ ಕಡಿತವನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ. ಇದಕ್ಕಾಗಿ ಸರ್ಕಾರ ಕೆಲವು ಪ್ರಸ್ತಾಪಗಳನ್ನು ಸಿದ್ಧಪಡಿಸಿದೆ, ಆದರೆ ಘೋಷಣೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ಮಾಧ್ಯಮಗಳ ಪ್ರಕಾರ ವರದಿಯ ಪ್ರಕಾರ, “ನಿರ್ಣಯವನ್ನು ಅಂಗೀಕರಿಸಿದ ನಂತರ ಬೆಲೆಗಳನ್ನು ಶೇಕಡಾ 70 ರಷ್ಟು ಕಡಿತಗೊಳಿಸಲಾಗುವುದು. ಪ್ರಸ್ತುತ ವ್ಯಾಪಕ ಚಲಾವಣೆಯಲ್ಲಿರುವ ಔಷಧಿಗಳನ್ನು ಸೇರಿಸಲು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (ಎನ್ಎಲ್ಇಎಂ), 2015 ಅನ್ನು ಪರಿಷ್ಕರಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ರೋಗಿಗಳು ದೀರ್ಘಕಾಲದವರೆಗೆ ಬಳಸುವ ಔಷಧಗಳ ಮೇಲಿನ ಹೆಚ್ಚಿನ ವ್ಯಾಪಾರದ ಮಾರ್ಜಿನ್ ಅನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಜುಲೈ 26 ರಂದು ಫಾರ್ಮಾ ಉದ್ಯಮದ ಪ್ರತಿನಿಧಿಗಳೊಂದಿಗೆ ಅಂತಿಮ ಪ್ರಸ್ತಾಪದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.