ಬೆಂಗಳೂರು : ಶಿಕಾರಿಪುರ ಕ್ಷೇತ್ರವನ್ನು ತಾನು ಖಾಲಿ ಮಾಡುತ್ತಿದ್ದೇನೆ. ಈ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರ ( BY Vijayendra ) ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2022 ) ಸ್ಪರ್ಧಿಸಲಿದ್ದಾರೆ. ಅವನನ್ನು ತನ್ನ ಗೆಲ್ಲಿಸುವಂತೆ ಗೆಲ್ಲಿಸಿ ಎಂಬುದಾಗಿ ಕ್ಷೇತ್ರದ ಜನತೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಮನವಿ ಮಾಡಿದ್ದರು. ಆದ್ರೇ.. ಇದೀಗ ಆ ಮಾತನ್ನೇ ಉಲ್ಟಾ ಹೊಡೆದಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ತಾನು ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಖಾಲಿ ಮಾಡುತ್ತಿದ್ದೇನೆ. ಪುತ್ರ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಹೇಳಿದ್ದಂತ ಹೇಳಿಕೆ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ತಲ್ಲಣವನ್ನೇ ಸೃಷ್ಠಿಸಿತ್ತು. ಈ ಸಂಬಂಧ ಯಡಿಯೂರಪ್ಪ ಅವರನ್ನು ಸಾಲು ಸಾಲು ನಾಯಕರೇ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಈ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕ್ಷೇತ್ರದ ಜನತೆಯ ಒತ್ತಾಯಕ್ಕಾಗಿ ಹಾಗೆ ಹೇಳಿದ್ದೇನೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಆ ಹೇಳಿಕೆ ಅನಿರೀಕ್ಷಿತವಾಗಿದೆ. ಆ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಮಾಡಲಿದ್ದಾರೆ ಎಂಬುದಾಗಿ ಉಲ್ಟಾ ಹೊಡೆದಿದ್ದಾರೆ.
ಶಿಕಾರಿಪುರ ಕ್ಷೇತ್ರದ ಜನತೆ ನನ್ನ ಮುಂಬರುವ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದರು. ಆಗ ಅನಿರೀಕ್ಷಿತವಾಗಿ ನಾನು ಚುನಾವಣೆಗೆ ನಿಲ್ಲೋದಿಲ್ಲ. ನನ್ನ ಪುತ್ರ ನಿಲ್ಲೋದಾಗಿ ಹೇಳಿದ್ದೆ. ನನ್ನ ಪುತ್ರ ಮೈಸೂರು, ಚಾಮರಾಜನಗರ, ಹಳೇ ಮೈಸೂರು ಭಾಗ ಯಾವುದಾದರೂ ಸರಿಯೇ ವರಿಷ್ಠರು ಸೂಚಿಸಿದ ಕಡೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಅದು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರು ಸೇರಿ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂಬುದಾಗಿ ಹೇಳಿದ್ದಾರೆ.