ನವದೆಹಲಿ : “ನಾನು ಗಾಂಧಿ ಕುಟುಂಬದ ವಿರುದ್ಧ ಮಾತನಾಡುತ್ತೇನೆ ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನ ಮಗಳನ್ನು ಟಾರ್ಗೆಟ್ ಮಾಡುತ್ತಿದೆ” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಇರಾನಿ ಭಾವೋದ್ವೇಗೊಂಡು ಕಣ್ಣೀರು ಹಾಕುತ್ತಾ, ತಮ್ಮ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನ ನಿರಾಕರಿಸಿದರು. ಇನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ₹5,000 ಕೋಟಿ ಲೂಟಿ ಮಾಡಿದ ಬಗ್ಗೆ ತಮ್ಮ ತಾಯಿ ಪತ್ರಿಕಾಗೋಷ್ಠಿ ನಡೆಸಿರುವುದು ತಮ್ಮ ಮಗಳ ತಪ್ಪು ಎಂದು ತಿರುಗೇಟು ನೀಡಿದರು.
2024ರಲ್ಲಿ ಮತ್ತೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಇರಾನಿ ಸವಾಲು ಹಾಕಿದರು. “ಅವ್ರು ಮತ್ತೆ ಸೋಲುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಹೇಳಿದರು. ಇನ್ನು “ನಾನು ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಉತ್ತರಗಳನ್ನ ಕೇಳುತ್ತೇನೆ” ಎಂದು ಹೇಳಿದರು.