ನವದೆಹಲಿ : ದೇಶದಲ್ಲಿ ಬೆಲೆ ಏರಿಕೆಯ ಬಿಸಿಯನ್ನ ಸಾಮಾನ್ಯ ನಾಗರಿಕರು ಅನುಭವಿಸ್ತಿರುವ ನಡುವೆ ಕೇಂದ್ರ ಸಚಿವರು ರಸ್ತೆಬದಿ ನಿಂತು ಒಂದು ಮೆಕ್ಕೆಜೋಳ ಕೊಳ್ಳಲು ಚೌಕಾಶಿ ಮಾಡ್ತಿರುವ ವಿಡಿಯೋ ಸಧ್ಯ ವೈರಲ್ ಆಗಿದೆ.
ಮಧ್ಯಪ್ರದೇಶದ ರಸ್ತೆ ಬದಿ ವ್ಯಾಪಾರಿಯೊಬ್ಬರು ಮೆಕ್ಕೆಜೋಳ ಮಾರಾಟ ಮಾಡ್ತಿದ್ದು, ಆ ರಸ್ತೆಯಲ್ಲಿಯೇ ಕೇಂದ್ರ ಸಚಿವರು ಹಾದು ಹೋಗ್ತಿರುವಾಗ ಜೋಳ ಖರೀದಿಸಲು ಕಾರು ನಿಲ್ಲಿಸಿದ್ದಾರೆ. ಹೌದು, ಕೇಂದ್ರ ಉಕ್ಕು ಸಚಿವಾಲಯದ ರಾಜ್ಯ ಸಚಿವ ಮತ್ತು ಬಿಜೆಪಿ ನಾಯಕ ಫಗ್ಗನ್ ಸಿಂಗ್ ಕುಲಸ್ತೆ ₹45 ಬೆಲೆಗೆ ಮೂರು ಜೋಳ ತೆಗೆದುಕೊಳ್ಳ ಚೌಕಾಶಿ ಮಾಡುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ನಂತ್ರ ‘ಇದು ತುಂಬಾ ದುಬಾರಿ’ ಎಂದು ಹೇಳಿದ್ದಾರೆ. ಅಂದ್ಹಾಗೆ, ಸಚಿವರೇ ಸ್ವತಃ ಈ ವೀಡಿಯೊವನ್ನ ಟ್ವಿಟ್ಟರ್ʼನಲ್ಲಿ ಹಂಚಿಕೊಂಡಿದ್ದಾರೆ.
ಚೌಕಾಶಿ ಮಾಡುವಾಗ ಕುಲಸ್ತೆ, “45 ರೂಪಾಯಿ.? ಇದು ತುಂಬಾ ದುಬಾರಿಯಾಗಿದೆ.” ಇದನ್ನು ಅನುಸರಿಸಿ, ಮಾರಾಟಗಾರನು ಮುಗುಳ್ನಗೆಯೊಂದಿಗೆ ಉತ್ತರಿಸಿದನು, “ಇದು ಪ್ರಮಾಣಿತ ದರವಾಗಿದೆ. ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದುದರಿಂದ ನಾನು ದುಬಾರಿ ಬೆಲೆಗೆ ಕೊಡ್ತಿಲ್ಲ” ಎಂದರು. ಅದಕ್ಕೆ ಕುಲಸ್ತೆ, “ಇಲ್ಲಿ ಜೋಳಗಳು ಉಚಿತವಾಗಿ ಲಭ್ಯವಿವೆ” ಎನ್ನುತ್ತಾ, ಅಂಗಡಿ ಮಾಲೀಕರಿಗೆ ಹಣ ಪಾವತಿಸಿದರು.
ಇನ್ನು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಕುಲಸ್ತೆ, “ಇಂದು ಸಿಯೋನಿಯಿಂದ ಮಾಂಡ್ಲಾಗೆ ಹೋಗುತ್ತಿದ್ದೇನೆ. ಸ್ಥಳೀಯ ಜೋಳದ ರುಚಿ ನೋಡಿದೆವು. ನಾವೆಲ್ಲರೂ ಸ್ಥಳೀಯ ರೈತರು ಮತ್ತು ಅಂಗಡಿಕಾರರಿಂದ ಆಹಾರ ಪದಾರ್ಥಗಳನ್ನ ಖರೀದಿಸಬೇಕು. ಇದು ಅವರಿಗೆ ಉದ್ಯೋಗ ಮತ್ತು ಕಲಬೆರಕೆಯಾಗದ ಸರಕುಗಳನ್ನ ಖಾತ್ರಿಪಡಿಸುತ್ತದೆ” ಎಂದಿದ್ದಾರೆ.
ಏತನ್ಮಧ್ಯೆ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅವ್ರನ್ನ ತರಾಟೆಗೆ ತೆಗೆದುಕೊಂಡಿದ್ದು, “ಅವ್ರು ಎಷ್ಟು ಬಡವನೆಂದ್ರೆ ಒಂದು ತುಂಡು ಜೋಳಕ್ಕೆ ₹15 ಅವ್ರಿಗೆ ತುಂಬಾ ದುಬಾರಿಯಾಗಿದೆ. ಇನ್ನು ಸಾಮಾನ್ಯ ನಾಗರಿಕರ ಪರಿಸ್ಥಿತಿಯೇನು..? ” ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಕೆ.ಮಿಶ್ರಾ ಟ್ವೀಟ್ ಮಾಡಿದ್ದಾರೆ.
ವೈರಲ್ ವಿಡಿಯೋ ನೋಡಿ
आज सिवनी से मंडला जाते हुए। स्थानीय भुट्टे का स्वाद लिया। हम सभी को अपने स्थानीय किसानों और छोटे दुकानदारों से खाद्य वस्तुओं को ख़रीदना चाहिए। जिससे उनको रोज़गार और हमको मिलावट रहित वस्तुएँ मिलेंगी। @MoRD_GoI @BJP4Mandla @BJP4MP pic.twitter.com/aNsLP2JOdU
— Faggan Singh Kulaste (@fskulaste) July 21, 2022