ಬೆಂಗಳೂರು : ಶಿಕಾರಿಪುರದ ಜನಯ ಒತ್ತಾಯಕ್ಕೆ ಮಣಿದು ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಪಕ್ಷದ ತೀರ್ಮಾನವೇ ಅಂತಿಮವಾಗುತ್ತೆ ಎಂದು ನಿನ್ನೆ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯುಟರ್ನ್ ಹೊಡೆದಿದ್ದಾರೆ.
ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ, “ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಅಂತಿಮ ತೀರ್ಮಾನ ಮಾಡೋದು ಮೋದಿ, ಶಾ, ಜೆ.ಪಿ ನಡ್ಡಾ. ಪಕ್ಷದ ತೀರ್ಮಾನವೇ ಅಂತಿಮ ಎಂದರು.
ಇನ್ನು “ಹಳೇ ಮೈಸೂರು ಭಾಗದಲ್ಲಿ ಬೇಕಾದ್ರೂ ವಿಜಯೇಂದ್ರ ಸ್ಪರ್ಧಿಸ್ತಾರೆ. ಎಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಶಕ್ತಿ ಬಿ.ವೈ ವಿಜಯೇಂದ್ರಗಿದೆ. ಶಿಕಾರಿಪುರದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿನ್ನೆ ಹೇಳಿದ್ದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ಧರಾಗಿರುತ್ತೇವೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಸೂಚನೆ ಪಾಲಿಸುತ್ತೇವೆ. ನಾನು ಸಲಹೆ ಕೊಡಬಹುದಷ್ಟೇ, ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಬಿಎಸ್ವೈ ಹೇಳಿದರು.