ಉತ್ತರ ಪ್ರದೇಶ : ಇಂದು ಮುಂಜಾನೆ ಕನ್ವರ್ ಯಾತ್ರೆಗೆ ತೆರಳುತ್ತಿದ್ದ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದು, ಇದೀಗ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
#UPDATE | After one injured died during treatment, death toll rises to 6 in the incident where Kanwariyas from Madhya Pradesh's Gwalior were mowed down by a truck in Hathras district, Uttar Pradesh earlier today.
— ANI UP/Uttarakhand (@ANINewsUP) July 23, 2022
ಕನ್ವರ್ ಯಾತ್ರೆಗೆ ತೆರಳಿದ ಒಟ್ಟು 7 ಜನರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ವಾಲಿಯರ್ನಿಂದ ಬಂದ ಕನ್ವರಿಯಾಗಳು(ಭಕ್ತರು) ಹರಿದ್ವಾರದಿಂದ ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 2.15ರ ಸುಮಾರಿಗೆ ಟ್ರಕ್ ಇವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಟ್ರಕ್ ಚಾಲಕನ ಬಗ್ಗೆ ಮಾಹಿತಿ ಸಿಕ್ಕಿದೆ ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ.
UP | 5 dead after Kanwar devotees from MP's Gwalior were mowed down by a truck in Hathras district during early hours, today pic.twitter.com/8UZjFzZMJM
— ANI UP/Uttarakhand (@ANINewsUP) July 23, 2022
ಈ ವಾರದ ಆರಂಭದಲ್ಲಿ ಹರಿದ್ವಾರದಲ್ಲಿ ಸ್ನಾನ ಮಾಡುವಾಗ ಗಂಗಾ ನದಿಯ ಪ್ರವಾಹಕ್ಕೆ ಏಳು ಕನ್ವಾರಿಯಾಗಳು ಕೊಚ್ಚಿಹೋಗಿದ್ದರು. ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿತ್ತು.
ಗಂಗಾಘಾಟ್ಗಳಲ್ಲಿರುವ ಭಕ್ತರು ನದಿಯ ಬಲವಾದ ಪ್ರವಾಹದಿಂದ ದೂರವಿರುವಂತೆ ಅವರು ಒತ್ತಾಯಿಸಿದರು. ನಿನ್ನೆಯೂ ಕೂಡ ಮಹಿಳೆಯೊಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ವಲಯ ಮ್ಯಾಜಿಸ್ಟ್ರೇಟ್ ನರೇಶ್ ಚೌಧರಿ ತಿಳಿಸಿದ್ದಾರೆ.
ಈ ಬೆನ್ನಲ್ಲಿ ಈ ಅಪಘಾತ ಸಂಭವಿಸಿ ಆರು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಭಗವಾನ್ ಶಿವನ ಭಕ್ತರು ಉತ್ತರಾಖಂಡದ ಹರಿದ್ವಾರ, ಋಷಿಕೇಶ, ಗೌಮುಖ ಮತ್ತು ಇತರ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ನಡೆದು ಗಂಗಾ ನದಿಯ ನೀರನ್ನು ಶ್ರಾವಣದಲ್ಲಿ ತಂದು ದೇವರಿಗೆ ಅರ್ಪಿಸುತ್ತಾರೆ. ಕಾಲ್ನಡಿಗೆ ವೇಳೆ ಟ್ರಕ್ ಅಪಘಾತದ ದುರಂತ ಸಂಭವಿಸಿದೆ.
#UPDATE | Ex-gratia of Rs 1 Lakh each announced for the six kanwariyas from MP's Gwalior who died after they were mowed down by a truck in Hathras district, UP: Office of Deputy Collector, Sadabad (Hathras) pic.twitter.com/dfeHle3RKN
— ANI UP/Uttarakhand (@ANINewsUP) July 23, 2022
ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಮಧ್ಯಪ್ರದೇಶದ ಗ್ವಾಲಿಯರ್ನ ಆರು ಕನ್ವಾರಿಯಾಗಳಿಗೆ ತಲಾ 1 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ ಎಂದು ಇದೀಗ ಮಾಹಿತಿ ನೀಡಲಾಗಿದೆ.