ಬೆಂಗಳೂರು : 2022-23ರ ರಾಜ್ಯ ಬಜೆಟ್ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್ಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆ ವತಿಯಿಂದ “ರೈತ ಶಕ್ತಿ” ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್ನಲ್ಲಿ ನೋಂದಾಯಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
BIGG NEWS : ಆದಾಯ ತೆರಿಗೆದಾರರೇ ಗಮನಿಸಿ : `ITR’ ಸಲ್ಲಿಕೆ ಗಡುವು ವಿಸ್ತರಣೆ ಇಲ್ಲ!
ಈ ಯೋಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ, ಫ್ರೂಟ್ಸ್/FRUITS (Farmers Registration and Unified Beneficiary information System-ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) portal ನಲ್ಲಿನ ನೋಂದಣಿಯಂತೆ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ. 250/- ರಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು.
BIGG NEWS : ಕರ್ನಾಟಕ ಉದ್ಯೋಗ ನೀತಿ-2022-25 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ|New Employment Policy
ಫ್ರೂಟ್ಸ್/FRUITS (Farmers Registration and Unified Beneficiary information System) ಕರ್ನಾಟಕ ಸರ್ಕಾರ ಇ-ಇಲಾಖೆಯ ಪೋರ್ಟಲ್ ಆಗಿದ್ದು, ಕಂದಾಯ ಇಲಾಖೆಯ “ಭೂಮಿ”(Bhoomi) ಪೋರ್ಟಲ್ನೊಂದಿಗೆ ಸಂಯೋಜಿಸಲಾಗಿದ್ದು, ರೈತರ ಭೂ ಹಿಡುವಳಿಯ ವಿವರವನ್ನು ವಿಳಾಸ ಮತ್ತು ಬ್ಯಾಂಕ್ ವಿವರದೊಂದಿಗೆ ನೋಂದಾಯಿಸಿದರೆ ರೈತರಿಗೆ ಗುರುತಿನ ಸಂಖ್ಯೆ/ FID (farmer ID)ನೀಡಲಾಗುವುದು.
Good News : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಶೂ, ಸಾಕ್ಸ್ ವಿತರಣೆಗೆ 123 ಕೋಟಿ ಅನುದಾನಕ್ಕೆ ಅನುಮೋದನೆ
ಕೃಷಿ ಮತ್ತು ಸಂಬಂಧಿತ ಇಲಾಖೆಯ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಫ್ರೂಟ್ಸ್ ತಂತ್ರಾಶವನ್ನು ಬಳಸಲಾಗುವುದು ಮತ್ತು ಸವಲತ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾವಣೆ ಮಾಡುವ ಸಂದರ್ಭಗಳಲ್ಲಿ ತಂತ್ರಾಂಶದ ಮೂಲಕ ನೇರ ನಗದು ವರ್ಗಾವಣೆ (Core DBT Portal) ಮಾಡಲಾಗುವುದು.
ಈಗಾಗಲೇ ಸಾಕಷ್ಟು ರೈತರು ಫ್ರೂಟ್ಸ್/FRUITS portal ನಲ್ಲಿ ಕೆಲವು ಸರ್ವೆ ನಂಬರ್/ ಭೂ ಹಿಡುವಳಿಯೊಂದಿಗೆ ನೋಂದಾಯಿಸಿಕೊಂಡಿದ್ದು, ಪ್ರತಿ ಎಕರೆಗೆ ರೂ. 250/- ರಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡೀಸೆಲ್ ಸಹಾಯಧನವನ್ನು ಎಕರೆವಾರು ನೀಡುವುದರಿಂದ ತಮ್ಮ ಉಳಿದ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು 2022ರ ಆಗಸ್ಟ್ 20 ರೊಳಗೆ ರೊಳಗೆ ಸೇರಿಸುವುದು.
ಫ್ರೂಟ್ಸ್/ FRUITS portal ನಲ್ಲಿ ನೋಂದಣಿಯಾಗಿರದಿದ್ದಲ್ಲಿ, ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ/ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಚೇರಿಗಳಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು ಸೇರಿಸುವುದರೊಂದಿಗೆ ನೋಂದಾಯಿಸಿಕೊಳ್ಳುವುದು.
ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ/ತೋಟಗಾರಿಕೆ/ರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್/FRUITS portal ನಲ್ಲಿ ನೋಂದಣಿ ಅಗತ್ಯವಾಗಿರುವುದರಿಂದ ರೈತ ಬಾಂಧವರು ಸಹಕರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.