ಬೆಂಗಳೂರು : ಕನ್ನಡಿಗರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಆಧರಿಸಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.
BIGG NEWS : ದೇಶದ ಜನತೆಗೆ’ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ವಿದ್ಯುತ್ ಬೆಲೆ ’80 ಪೈಸೆ’ ಹೆಚ್ಚಳ
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದಂತ ಸಚಿವ ಜೆ ಸಿ ಮಾಧುಸ್ವಾಮಿಯವರು,. ಈ ಸಭೆಯಲ್ಲಿ ಹೆಚ್ಚುವರಿ ಹೂಡಿಕೆ ಮಾಡುವ ಕಂಪನಿಗಳ ಆಧಾರದ ಮೇಲೆ ಕನ್ನಡಿಗರಿಗೆ ಶೇ. 2.5 ರಿಂದಶೇ. 3 ರಷ್ಟು ಉದ್ಯೋ ನೀಡುವ ನೀತಿ ಇದಾಗಿದೆ. ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಆಧರಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ನೀತಿಯ ಮೂಲಕ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಭೆಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ( School Children’s ) ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡೋದಕ್ಕೆ 123 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಿದೆ. ಇದಲ್ಲದೇ ಇನ್ನೂ ಅನೇಕ ಪ್ರಗತಿಪರ ಯೋಜನೆಗಳಿಗೆ ಅನುದಾನವನ್ನು ಒದಗಿಸೋದಕ್ಕೂ ಅನುಮೋದಿಸಲಾಗಿದೆ.
ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಬಗ್ಗೆ ಮಾತನಾಡಿದ ಅವರು, ಆ ಭಾಗದ ಜನತೆಗೆ ಅನ್ಯಾಯವಾಗಲಿದೆ. ಎರಡು ಬಾರಿ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. ಅರಣ್ಯ ಜನರನ್ನ ಒಕ್ಕಲೆಬ್ಬಿಸುವುದು ಸರಿಯಲ್ಲ. ಇದರ ಬಗ್ಗೆ ಸಮಗ್ರ ವಿವರವನ್ನ ಕೇಂದ್ರಕ್ಕೆ ಸ್ಪಷ್ಟಪಡಿಸಿದ್ದೇವೆ. ಕಸ್ತೂರಿರಂಗನ್ ವರದಿಗೆ ಸರ್ಕಾರ ವಿರೋಧವಿದೆ ಎಂದರು.
ಒಬಿಸಿ ಮೀಸಲಾತಿ ಸುಪ್ರೀಂ ಮುಂದಿದೆ. ಹಾಗಾಗಿ ಅದರ ಬಗ್ಗೆ ಚರ್ಚೆ ಇಲ್ಲ. ಭಕ್ತವತ್ಸಲಂ ಕಮಿಟಿ ರಿಪೋರ್ಟ್ ಕೊಟ್ಟಿದೆ. ಸೆಪ್ಟಂಬರ್ ವರೆಗೆ ಇದರ ಬಗ್ಗೆ ಗಮನಹರಿಸಲ್ಲ
ಸುಪ್ರೀಂ ಏನು ಹೇಳುತ್ತೆ ಅದರ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮೀಸಲಾತಿ ಬಹಳ ಗೊಂದಲವಿದೆ. ನಿರ್ದಿಷ್ಟ ಮಾನದಂಡಗಳು ಇದರ ಬಗ್ಗೆ ಇಲ್ಲ. ಆರ್ಥಿಕ ಶೈಕ್ಷಣಿಕ ಮೀಸಲಾತಿ ಇದಕ್ಕೂ ಅನ್ವಯಿಸಿದ್ದೆವು. ರಾಜಕೀಯ ಮೀಸಲಾತಿಗೂ ಅನ್ವಯಿಸಿದ್ದೆವು. ಹಾಗಾಗಿ ಇದರ ಬಗ್ಗೆ ಇನ್ನೂ ಗೊಂದಲವಿದೆ ಎಂದು ತಿಳಿಸಿದರು.