ಕೆಎನ್ಎನ್ಡಿಜಿಟಲ್ ಡೆಸ್ಕ್ : ಯುವ ನಾಯಕನಟ ಶ್ರೀವಿಷ್ಣು ಅವ್ರಿಗೆ ಕೆಲ ದಿನಗಳ ಹಿಂದೆ ಡೆಂಗ್ಯೂ ದೃಢಪಟ್ಟಿತ್ತು. ಆರಂಭದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತಾದರೂ, ಪ್ಲೇಟ್ಲೆಟ್ಗಳು ತೀವ್ರವಾಗಿ ಕುಸಿದಿದ್ದರಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನ ಹೈದರಾಬಾದ್ನ ಪ್ರಸಿದ್ಧ ಆಸ್ಪತ್ರೆಗೆ ಸಾಗಿಸಲಾಗಿದೆ.
ಅನುಭವಿ ವೈದ್ಯರ ಸಮ್ಮುಖದಲ್ಲಿ ಶ್ರೀವಿಷ್ಣುಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶ್ರೀವಿಷ್ಣು ಆಸ್ಪತ್ರೆಯಲ್ಲಿರುವ ಕಾರಣ ಕುಟುಂಬಸ್ಥರು ಹಾಗೂ ಆಪ್ತರು ಕೊಂಚ ಆತಂಕಗೊಂಡಿದ್ದಾರೆ. ಇನ್ನು ಶ್ರೀವಿಷ್ಣು ಗುಣರಾಗಿ ಆಸ್ಪತ್ರೆಯಿಂದ ಶೀಘ್ರ ಡಿಸ್ಚಾರ್ಜ್ ಆಗಲಿ ಎಂದು ಅಭಿಮಾನಿಗಳು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಇನ್ನು ಸಿನಿಮಾಗಳ ವಿಷ್ಯಕ್ಕೆ ಬಂದ್ರೆ ಶ್ರೀವಿಷ್ಣು ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರ ಕಾಣಿಸಿಕೊಳ್ತಿರುವ ಚಿತ್ರ ‘ಅಲ್ಲೂರಿ’.. ಅಲ್ಲೂರಿ ಸೀತಾರಾಮರಾಜು ಜಯಂತಿಯ ದಿನ ಟೀಸರ್ ಬಿಡುಗಡೆಯಾಯಿತು. ಇನ್ನು ಚಿತ್ರತಂಡ ಒಳ್ಳೆ ಡೇಟ್ ನೋಡಿಕೊಂಡು ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲು ತಯಾರಿ ನಡೆಸಲಾಗುತ್ತಿದೆ.