ಬೆಂಗಳೂರು: ನಗರದಲ್ಲಿ ಶಾಲೆಗೆ ತಮ್ಮ ಮಕ್ಕಳನ್ನ ಬಿಡಲು ಬಂದಾಗ ವಾಹನಗಳನ್ನ ಎಲ್ಲೆಂದರಲ್ಲಿ ಇಡುತ್ತಿದ್ದರು. ಅದರಲ್ಲೂ ಜನರು ಓಡಾಡುವಂತಹ ಫುಟ್ ಪಾತ್ ಗಳಲ್ಲಿ ಬೈಕ್ ನಿಲ್ಲಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಹೀಗಾಗಿ ಟ್ರಾಫಿಕ್ ಪೊಲೀಸರು ಹಾಗೆನಾದರೂ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
BIG BREAKING NEWS: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಖಚಿತ; ಅಧಿಕೃತವಾಗಿ ಬಿಎಸ್ ವೈ ಘೋಷಣೆ
ಪೋಷಕರು ಫುಟ್ ಪಾತ್ ನಲ್ಲಿ ದ್ವಿಚಕ್ರ ವಾಹನ ತಮ್ಮ ಮಕ್ಕಳೊಂದಿಗೆ ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘಿಸಲಾಗಿದ್ದು, ಪೊಲೀಸರು ಕ್ರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ವೀಡಿಯೊವನ್ನು ಕರಣ್ವೀರ್ ಮುಂಡ್ರೆ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಪೋಷಕರು ತಮ್ಮ ಮಕ್ಕಳನ್ನು ಸಹ ಡ್ರಾಪ್ ಮಾಡುವಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ನೋಡಿ ತುಂಬಾ ದುಃಖವಾಗಿದೆ. ನಾವು ಉತ್ತಮ ರಸ್ತೆಗಳಿಗಾಗಿ ಅಳುತ್ತೇವೆ. ನಾವು ಅವುಗಳನ್ನು ಪಡೆದಾಗ, ನಾವು ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ.” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
So sad to see parents breaking traffic rules while dropping their children to
We cry for good roads. When we get them, we misuse them. @blrcitytraffic @BlrCityPolice #school pic.twitter.com/FQTVVs8dI5
— Karnvir Mundrey (@karnvirmundrey) July 21, 2022