ತಿರುವನಂತಪುರಂ: ಕೇರಳದ ವಯನಾಡ್ ಜಿಲ್ಲೆಯ ಮನಂತವಾಡಿಯ ಎರಡು ಎರಡು ಪ್ರದೇಶಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಭೋಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ನಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ಜಿಲ್ಲೆಯ ಹಳ್ಳಿಯೊಂದರಲ್ಲಿರುವ ಎರಡು ಫಾರ್ಮ್ಗಳ ಹಂದಿಗಳಲ್ಲಿ ಈ ರೋಗ ದೃಢಪಟ್ಟಿದೆ.
ಪಶು ಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದು, ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಹೇಳಿದರು. ಇದೇ ವೇಳೆ ಅವರು ಮಾತನಡುತ್ತ, “ಈಗ ಪರೀಕ್ಷಾ ಫಲಿತಾಂಶವು ಸೋಂಕನ್ನು ದೃಢಪಡಿಸಿದೆ. ಎರಡನೇ ಫಾರಂನ 300 ಹಂದಿಗಳನ್ನು ಕೊಲ್ಲಲು ನಿರ್ದೇಶನಗಳನ್ನು ನೀಡಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಅವರು ಮಾತನಾಡಿ, ರೋಗ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದರು. ಈ ನಡುವೆ ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರವು ವರದಿಯಾಗಿದೆ ಎಂದು ಕೇಂದ್ರದಿಂದ ಎಚ್ಚರಿಕೆ ಬಂದ ನಂತರ ಕೇರಳ ರಾಜ್ಯವು ಈ ತಿಂಗಳ ಆರಂಭದಲ್ಲಿ ಜೈವಿಕ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ.
HEALTH TIPS : ಮೈ-ಕೈ ನೋವು ಹೋಗಲಾಡಿಸಲು ಸುಲಭವಾದ ಪರಿಹಾರಗಳಿವೆ..! ತಜ್ಞರ ಸಲಹೆ
BIGG NEWS : `BBMP’ ಚುನಾವಣೆ ; ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ
ಬೇರೆಯವನೊಂದಿಗೆ ಲವ್ವಿಡವ್ವಿ: ವಿಜಯನಗರದಲ್ಲಿ ವಿವಾಹಿತ ವ್ಯಕ್ತಿಯಿಂದ ಮಾಜಿ ಪ್ರೇಯಸಿಯ ಶಿರಚ್ಛೇದ