ವಿಜಯನಗರ: ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ತಲೆ ಕಡಿದು ಅದನ್ನು ಪೊಲೀಸ್ ಠಾಣೆಗೆ ಸಾಗಿಸಿದ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರಣ್ಣಯ್ಯನ ಹಟ್ಟಿಯಲ್ಲಿ ನಡೆದಿದೆ.
ಬೋಜರಾಜ (25) ಎಂಬ ವ್ಯಕ್ತಿ ನರ್ಸಿಂಗ್ ವಿದ್ಯಾರ್ಥಿನಿ ನಿರ್ಮಲಾ (21) ಎಂಬಾಕೆಯನ್ನು ಕೊಲೆ ಮಾಡಿ ಆಕೆಯ ತಲೆ ಕತ್ತರಿಸಿದ್ದಲ್ಲದೇ, ಸ್ವತಃ ತಾನೇ ಅದನ್ನು ಪೊಲೀಸ್ ಠಾಣೆಗೆ ಒತ್ತೊಯ್ದಿದ್ದಾನೆ.
ತನಿಖೆಯಲ್ಲಿ, ನಿರ್ಮಲಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂಬುದೇ ಅಪರಾಧದ ಹಿಂದಿನ ಉದ್ದೇಶವಾಗಿದೆ. ಬೋಜರಾಜ ಕೂಡ ಇತ್ತೀಚೆಗಷ್ಟೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈತ ಕೂಡ್ಲಿಗಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಮೊದಲು ಬೋಜರಾಜ ಮತ್ತು ನಿರ್ಮಲಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಈಗಾಗಲೇ ಬೋಜರಾಜನನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), ಮತ್ತು 450 (ಅಪರಾಧ ಮಾಡುವ ಸಲುವಾಗಿ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
BIGG BREAKING NEWS : ಇಂದೇ `KCET’ ಫಲಿತಾಂಶ ಪ್ರಕಟ ಸಾಧ್ಯತೆ| KCET Result 2022
Heatwave: ಸ್ಪೇನ್ನಲ್ಲಿ ಶಾಖದ ಅಲೆ ಹೊಡೆತಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ…