ಬೆಂಗಳೂರು : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ವಿದ್ಯುತ್ ಲೈನ್ ಕಟ್ ಆಗಿ ರಾಜಕಾಲುವೆಗೆ ಬಿದ್ದ ಸಂದರ್ಭದಲ್ಲಿ ಕಬ್ಬಿಣ ಆಯಲು ಹೋಗಿದ್ದಾಗ ಶಾಕ್ ಹೊಡೆದು 25 ವರ್ಷದ ಅಪ್ಪು ಎಂಬ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಹಲಸೂರು ಠಾಣಾ ಪೊಲೀಸರು , ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರೀಶಿಲನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಲೈನ್ ಕಟ್ ಆಗಿ ಒಂದಲ್ಲ ಒಂದು ಸಾವು ಸಂಭವಿಸುತ್ತಲೇ ಇದೆ. ಆದರೂ ಕೂಡಾ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಯಾರು ಗಮನಹರಿಸುತ್ತಿಲ್ಲವೆಂದು ಅಧಿಕಾರಿಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಜುಲೈ 13ನೇ ತಾರೀಕಿನಿಂದ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿತ್ತು. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದೇ 17ರಂದು 12 ವರ್ಷದ ಬಾಲಕ ರುಕ್ಮಾನ್ ಸಾವನ್ನಪಿದ್ದಾನೆ. ಏಪ್ರಿಲ್ 15ರಂದು ಕಿಶೋರ್ ಎಂಬಾತ ಸಾವನ್ನಪ್ಪಿದ್ದಾನೆ. ಕಳೆದ ಮೂರು ತಿಂಗಳಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.