ಬೆಂಗಳೂರು: 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಠಿಣ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಐಪಿಎಸ್ ಅಧಿಕಾರಿಗಳು ಆಗಬೇಕೆಂದು ಆಸೆ ಇತ್ತು. ಆದರೆ ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಐಪಿಎಸ್ ಅಧಿಕಾರಿಗಳಾಗಿ ಆಗುವುದಕ್ಕೆ ಸಾಧ್ಯ ಇಲ್ಲ. ಹೀಗಾಗಿ ಸ್ವಲ್ಪ ಹೊತ್ತುಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಮಾಡಿದ್ದಾರೆ. ಇದರಿಂದ ಆ ಮಕ್ಕಳ ಕನಸು ನನಸಾಗಿದೆ.
ಈ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ ಅವರು ಪೊಲೀಸ್ ಸಮವಸ್ತ್ರದಲ್ಲಿರುವ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ನಾನು ಡಿಸಿಪಿಗಳ ಗಮನದಲ್ಲಿ ನಿಂತಾಗ ಒಂದು ವಿನಮ್ರ ದಿನ. ಧೈರ್ಯಶಾಲಿ ಮಕ್ಕಳು, ಅವರು ಕಠಿಣ ರೋಗದ ವಿರುದ್ಧ ಹೋರಾಡುತ್ತಿದ್ದಾರೆ ಅವರ ಆಸೆಯನ್ನು ನನಸಾಗಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದೇನೆ. ಆದರೆ ಕೆಲವು ಗಂಟೆಗಳ ಕಾಲ ಮಾತ್ರ. ಅವರಿಗೆ ಅಪರಿಮಿತವಾದ ಸಂತೋಷ ಮತ್ತು ನಮಗೆ ಸಂತೃಪ್ತಿ ಆಗಿದೆ ಎಂದು ಹೇಳಿದ್ದಾರೆ.
A humbling day as I stood in attention to DCPs for the day. Courageous children, who are fighting a difficult disease and we played a small part in making their wish come true, albeit for a few hours only. Happiness unlimited for them and satisfaction for us. pic.twitter.com/4oEFrDcPz9
— C K Baba. I.P.S (@DCPSEBCP) July 21, 2022