ಪ್ರತಾಪಗಢ (ಉತ್ತರ ಪ್ರದೇಶ): ವ್ಯಕ್ತಿ ಸತ್ತರೆ, ಆತನ ಅಂತ್ಯಸಂಸ್ಕಾರ ಮಾಡಿ, ಸಾವಿನ ಹದಿಮೂರನೇ ದಿನ ತಿಥಿ ಮಾಡುವುದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಆದ್ರೆ, ಹದಿಮೂರನೇ ಕಾರ್ಯಕ್ರಮದ ವಿಚಿತ್ರ ಪ್ರಕರಣವೊಂದು ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ.
ಪ್ರತಾಪಗಢದಲ್ಲಿ ಮಾಲೀಕನೊಬ್ಬ ಸತ್ತ ಹುಂಜನ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, ಹದಿಮೂರನೇ ದಿನವೂ ಅದಕ್ಕೆ ತಿಥಿ ಕಾರ್ಯ ಮಾಡಿ, ಆ ಪ್ರದೇಶದ ಜನರೆಲ್ಲರಿಗೂ ಊಟ ಹಾಕಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕಂಡ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದಾರೆ.
ಈ ಘಟನೆ ಪ್ರತಾಪ್ಗಢ ಜಿಲ್ಲೆಯ ಫತಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಹ್ದೌಲ್ ಕಾಲಾ ಗ್ರಾಮದಲ್ಲಿ ನಡೆದಿದ್ದು, ಅಲ್ಲಿ ಡಾ. ಶಾಲಿಕ್ರಮ್ ಸರೋಜ್ ಎಂಬುವರು ಕ್ಲಿನಿಕ್ ನಡೆಸುತ್ತಿದ್ದಾರೆ. ಇವರು ಮನೆಯಲ್ಲಿ ಮೇಕೆ, ಹುಂಜ ಸಾಕಿದ್ದಾರೆ. ಇಡೀ ಕುಟುಂಬ ಹುಂಜನನ್ನು ಪ್ರೀತಿಸಲು ಪ್ರಾರಂಭಿಸಿತು. ಅವರು ಅದಕ್ಕೆ ಲಾಲಿ ಎಂದು ಹೆಸರಿಸಿದರು. ಜುಲೈ 8 ರಂದು ಡಾ.ಶಾಲಿಕ್ರಮ್ ಅವರ ಮೇಕೆ ಮರಿ ಮೇಲೆ ನಾಯಿ ದಾಳಿ ಮಾಡಿತ್ತು. ಇದನ್ನು ಕಂಡ ಲಾಲಿ ನಾಯಿಯೊಂದಿಗೆ ಘರ್ಷಣೆಗೆ ಮುಂದಾಯಿತು. ಈ ವೇಳೆ ಮೇಕೆಯ ಮರಿ ಬದುಕುಳಿಯಿತು. ಆದರೆ, ನಾಯಿ ದಾಳಿಯಿಂದ ಲಾಲಿ ಗಂಭೀರವಾಗಿ ಗಾಯಗೊಂಡು ಜುಲೈ 9 ರ ಸಂಜೆ ಲಾಲಿ ಸಾವನ್ನಪ್ಪಿತು.
ಲಾಲಿ ಮರಣದ ನಂತರ ಕುಟುಂಬವು ಅಂತ್ಯಕ್ರಿಯೆ ಮಾಡಿತು. ಇದು ಓಕೆ. ಆದ್ರೆ, ಡಾ.ಶಾಲಿಕ್ರಂ ಪದ್ಧತಿಯ ಪ್ರಕಾರ, ಹದಿಮೂರನೆಯ ದಿನ ಕೋಳಿಯ ತಿಥಿ ಮಾಡುವುದಾಗಿ ಘೋಷಿಸಿದಾಗ ಜನ ಬೆಚ್ಚಿಬಿದ್ದರು. ಅದರಂತೆಯೇ, ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಾರಂಭಿಸಿದವು. ತಲೆ ಬೋಳಿಸಿಕೊಳ್ಳುವುದರಿಂದ ಹಿಡಿದು ಇತರೆ ವಿಧಿವಿಧಾನಗಳು ಮುಗಿದವು. ಬುಧವಾರ ಬೆಳಗ್ಗೆಯಿಂದಲೇ ಮಿಠಾಯಿಗಾರರು ಹದಿಮೂರನೆಯವರ ಖಾದ್ಯವನ್ನು ಸಿದ್ಧಪಡಿಸತೊಡಗಿದರು. ಸಂಜೆ 6 ಗಂಟೆಯಿಂದ ರಾತ್ರಿ ಸುಮಾರು 10 ಗಂಟೆಯವರೆಗೆ ಸುಮಾರು 500 ಕ್ಕೂ ಹೆಚ್ಚು ಜನರು ಆಹಾರ ಸೇವಿಸಿದರು.
Big news: ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…