ಬೆಂಗಳುರು : ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಾನುವಾರು ವಿಮಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರತಿ ಫಲಾನುಭವಿಯು ಗರಿಷ್ಟ 5 ರಾಸುಗಳನ್ನು (ದನ/ಎಮ್ಮೆ) ವಿಮೆಗೆ ಒಳಪಡಿಸಬಹುದಾಗಿದೆ.
Big news: ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಎ.ಪಿ.ಎಲ್ ಫಲಾನುಭವಿಗಳಿಗೆ ಶೇ. 50 ಪ್ರೀಮಿಯಂ ಸಹಾಯಧನ ಸಿಗಲಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಬಿಪಿಎಲ್ ಫಲಾನುಭವಿಗಳಿಗೆ ಶೇ. 70 ಪ್ರೀಮಿಯಂ ಸಹಾಯಧನ ಸಿಗಲಿದೆ.
BIGG NEWS : ರಾಜ್ಯದ ವಿವಿಧ ಸಮುದಾಯದ ಮಠ, ದೇವಸ್ಥಾನಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ವಿಮಾ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳ ಜಾತಿ ಪ್ರಮಾಣ ಪತ್ರ
- ಸಾಮಾನ್ಯ ವರ್ಗದ ಫಲಾನುಭವಿಗಳು ಬಿಪಿಎಲ್ ಕಾರ್ಡ್
ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ತಾಲೂಕ ಸಹಾಯಕ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.